ಮುಂಬೈ: ನಟಿ ಕಂಗನಾ ರಣೌತ್ ಕಚೇರಿಯನ್ನು ನೆಲಸಮ ಮಾಡಿದ ಬಿಎಂಸಿ ವಿರುದ್ಧ ಬಾಂಬೆ ಹೈ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ 2 ಕೋಟಿ ರೂ ಗಳನ್ನು ಪರಿಹಾರ ನೀಡಬೇಕೆಂದು ಅರ್ಜಿ ತಿದ್ದಪಡಿ ಮಾಡಲಾಗಿದೆ.
ಸೆಪ್ಟೆಂಬರ್ 9 ರಂದು ಬಿಎಂಸಿ ನಟ ಕಂಗನಾ ರಣೌತ್ ಅವರ ಕಚೇರಿ ದ್ವಂಸಗೊಳಿಸಿದ್ದು, ಬಾಂಬೆ ಹೈಕೋರ್ಟ್ನಲ್ಲಿ ಬಾಕಿ ಇರುವ ಅರ್ಜಿಯನ್ನು ತಿದ್ದುಪಡಿ ಮಾಡಿ ಮುಂಬೈನ ಕಂಗನಾ ಕಚೇರಿಯು ಸುಮಾರು 40% ಹಾನಿಯಾಗಿದ್ದು, 2 ಕೋಟಿ ರೂ. ಪರಿಹಾರ ಕೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಯನ್ನು ಮುಂಬೈ ಪೊಲೀಸರು ನಿರ್ವಹಿಸುತ್ತಿರುವುದನ್ನು ಟೀಕಿಸಿದಾಗಿನಿಂದ ರನೌತ್ ರಾಜ್ಯ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿದೆ ಮತ್ತು ಪಾಕಿಸ್ತಾನ ಎಂದು ಉಲ್ಲೇಖಿಸಿರುವ ಕಂಗನಾ ಈಗಾ ಬಾರಿ ಸುದ್ದಿಯಲ್ಲಿದ್ದಾರೆ.
ಈ ನಡುವೆ ರಣೌತ್ ಅವರು ಕೇಂದ್ರ ಸರ್ಕಾರದಿಂದ ವೈ ಪ್ಲಸ್ ಭದ್ರತೆಯನ್ನು ಪಡೆದರು. ಸೆಪ್ಟೆಂಬರ್ 9 ರಂದು ಬಾಂಬೆ ಹೈಕೋರ್ಟ್ ಬಿಎಂಸಿ ಕಂಗನಾ ಅವರ ಕಚೇರಿ ದ್ವಂಸಗೊಳಿಸುವುದನ್ನು ನಿಲ್ಲಿಸುವಂತೆ ಹೈ ಕೋರ್ಟ್ ತಡೆಯಾಜ್ಞೆ ನೀಡಿತು.
ಸೆಪ್ಟೆಂಬರ್ 22 ರಂದು ನ್ಯಾಯಾಲಯ ಕಂಗನಾ ಅವರ ಅರ್ಜಿ ವಿಚಾರಣೆ ಮಾಡಲಿದೆ.