Thursday, July 7, 2022

Latest Posts

ಕಂಗನಾ ರಣೌತ್ ಕಚೇರಿ ಧ್ವಂಸ: ಹೈ ಕೋರ್ಟ್ ಮೊರೆ ಹೋದ ನಟಿ

ಮುಂಬೈ: ನಟಿ ಕಂಗನಾ ರಣೌತ್ ಮುಂಬೈಗೆ ಆಗಮಿಸುತ್ತಿದ್ದು, ಕಂಗನಾ ಕಚೇರಿಯನ್ನು ಬಿಎಂಸಿ ಧ್ವಂಸ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಂಗನಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರ ವಕೀಲರು ಕಚೇರಿ ಆವರಣ ಉರುಳಿಸಿರುವುದರ ವಿರುದ್ಧ ರಿಟ್ ಅರ್ಜು ಸಲ್ಲಿಸಿದ್ದಾರೆ.
ಬಾಂದ್ರಾ ವೆಸ್ಟ್ ಪಾಲಿ ಹಿಲ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಅನಧಿಕೃತ ನಿರ್ಮಾಣವಿದೆ ಎಂದು ಈಗಾಗಲೇ ಬಿಎಂಸಿ ನೊಟೀಸ್ ನೀಡಿದ್ದು, ಕಂಗನಾ ಅದಕ್ಕೆ ಉತ್ತರಿಸಿಲ್ಲ. ನೊಟೀಸ್ ನೀಡಿದ ೨೪ ಗಂಟೆವರೆಗೂ ನಾವು ಯಾರ ಕ್ರಮವನ್ನು ಕೈಗೊಂಡಿಲ್ಲ.ಕಂಗನಾ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಕಚೇರಿಯಲ್ಲಿ ಅನಧಿಕೃತ ನಿರ್ಮಾಣವಿರುವುದರಿಂದ ಕ್ರಮ ಕೈಗೊಳ್ಳಬೇಕಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಗನಾ ನನ್ನಿಂದ ಯಾವ ತಪ್ಪೂ ಆಗಿಲ್ಲ. ಆದರೆ ಹೀಗೆ ಮಾಡಿದ್ದಾರೆ. ಅಲ್ಲದೆ ಕೊರೋನಾ ಕಾರಣದಿಂದ ಸೆ.೩೦ರವರೆಗೆ ಯಾರೂ ಕಟ್ಟಡಗಳನ್ನು ಬೀಳಿಸುವಂತಿಲ್ಲ ಎಂಬ ಆರ್ಡ್‌ರ್ ಇದೆ. ಸ್ನೇಹಿತರೆ ನೋಡಿ ಇದೇ ಫ್ಯಾಸಿಸಂ ಅರ್ಥ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss