ಮುಂಬೈ: ಕಂಗನಾ ರಾಣಾವತ್ ಅವರ ವಿರುದ್ಧದ ಡ್ರಗ್ಸ್ ಸೇವನೆಯ ಆರೋಪದ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಉದ್ಧವ್ ಠಾಕ್ರೆ ಸರ್ಕಾರ ಶುಕ್ರವಾರ ಮುಂಬೈ ಪೊಲೀಸ್ಗೆ ಆದೇಶ ನೀಡಿದೆ.
ಕಂಗನಾ ಕೂಡ ನಿಷೇಧಿತ ಮಾದಕವಸ್ತು, ನಾರ್ಕೋಟಿಕ್ಸ್ ಡ್ರಗ್ಸ್ಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪದ ಕಾರಣ ಅದರ ತನಿಖೆಯಾಗಬೇಕು ಎಂದು ಸರ್ಕಾರ ಹೇಳಿದೆ.
ಸರ್ಕಾರದ ಆದೇಶ ಮುಂಬೈ ಪೊಲೀಸ್ ಕಚೇರಿ ತಲುಪಿದ್ದು, ಕ್ರೈಂ ಬ್ರಾಂಚ್ ಇದರ ತನಿಖೆ ನಡೆಸಲಿದೆ.
ಈ ಹಿಂದೆ ಹಿರಿಯ ನಟ ಶೇಖರ್ ಸುಮನ್ ಅವರ ಪುತ್ರ ನಟ ಅಧ್ಯಾಯನ್ ಸುಮನ್ ಅವರು ಕಂಗನಾ ವಿರುದ್ಧ ಡ್ರಗ್ಸ್ ಸೇವನೆಯ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಮಂಗಳವಾರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದರು.
ಈ ಸಂಬಂಧ ಅಧ್ಯಾಯನ್ ಸುಮನ್ ಮತ್ತು ಕಂಗನಾ ರಾಣಾವತ್ಗೆ ಸಮನ್ಸ್ ಜಾರಿಗೊಳಿಸುವುದಕ್ಕೆ ಮುಂಬೈ ಪೊಲೀಸರು ಸಿದ್ಧತೆ ನಡೆಸಿದ್ದಾರೆ.