ಬರಗುಡಿ ಗ್ರಾಮದಲ್ಲಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ: ಮಾರಾಕಾಸ್ತ್ರ ಜೀವಂತ ಗುಂಡುಗಳ ಜಪ್ತಿ

0
70

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದಲ್ಲಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಇಬ್ಬರನ್ನು ಬಂಧಿಸಿ, 77 ಸಾವಿರ ರೂ.ಗಳ ಮೌಲ್ಯದ ಅಕ್ರಮ ಕಂಟ್ರಿ ಪಿಸ್ತೂಲ್ ಸೇರಿದಂತೆ ಮಾರಾಕಾಸ್ತ್ರ ಹಾಗೂ ಜೀವಂತ ಗುಂಡುಗಳನ್ನು ಪೊಲೀಸರು ಶುಕ್ರವಾರ ಜಪ್ತಿ ಮಾಡಿದ್ದಾರೆ.

ಬರಗುಡಿ ಗ್ರಾಮದ ಸುಧೀರ ಕಾಮಣ್ಣ (25) ಹಾಗೂ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿಯ ಹಣಮಂತ ಹಳ್ಳಿ (40) ಬಂಧಿತ ಆರೋಪಿಗಳು. ಸುಧೀರ ಕಾಮಣ್ಣ ಹಾಗೂ ಹಣಮಂತ ಹಳ್ಳಿ ಇವರ ಬಳಿ ಅಕ್ರಮವಾಗಿ 3 ಕಂಟ್ರಿ ಪಿಸ್ತೂಲ್, 2 ಜೀವಂತ ಗುಂಡು, ಕಬ್ಬಿಣದ 2 ಮಾರಾಕಾಸ್ತ್ರ, 10 ಡಿಬಿಬಿಎಲ್ ಜೀವಂತ ಗುಂಡು, 3 ಮಚ್ಚು ಹಾಗು 1 ಚಾಕು ಇರುವ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಆಯುಧಗಳನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾರ್ಗದರ್ಶದಲ್ಲಿ ಈ ದಾಳಿ ನಡೆದಿದೆ. ನಗರದ ಅಪರಾಧ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

LEAVE A REPLY

Please enter your comment!
Please enter your name here