Wednesday, August 10, 2022

Latest Posts

ಕಂದಕಕ್ಕೆ ಉರುಳಿದ ಸಾರಿಗೆ ಬಸ್: ತಪ್ಪಿದ ಭಾರಿ ಅನಾಹುತ

ದಿಗಂತ ವರದಿ,ಧಾರವಾಡ:

ಮುಂದೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಸಾರಿಗೆ ಬಸ್ ಕಂದಕಕ್ಕೆ ಉರುಳಿದ ಘಟನೆ ಹೋಯ್ಸಳ ನಗರದ ಹತ್ತಿರ ಶನಿವಾರ ನಡೆದಿದ್ದು, ಭಾರಿ ಅನಾಹುತ ತಪ್ಪಿದೆ.

ಧಾರವಾಡ ಹಳಿಯಾಳ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಸಮಿಪ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಚಾಲಕ ಸೇರಿದಂತೆ ಮೂರು ಜನರಿಗೆ ಸಣ್ಣಪುಟ್ಟ ಗಾಯಳಾಗಿದ್ದು, ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ.

ಕೆ.ಎ-27 ಎಫ್-658 ಸಾರಿಗೆ ಸಂಸ್ಥೆಯ ಬಸ್ ಹುಬ್ಬಳ್ಳಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಬೆಳಗಾವಿ ಕಡೆಗೆ ತೆರಳುತ್ತಿತ್ತು.ಗಾಯಾಳುಗಳನ್ನು ವಾಹನ ಸವಾರರು ಹಾಗೂ ಪೊಲೀಸರು ಕೂಡಿಕೊಂಡು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss