ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಂದಕೂರ ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟಿದ್ದ ಸಾವಿತ್ರಮ್ಮ ಕುಟುಂಬಕ್ಕೆಶಾಸಕ ನಾಗನ ಗೌಡರಿಂದ ರೂ.5ಲಕ್ಷ ಚೆಕ್ ವಿತರಣೆ

ಯಾದಗಿರಿ: ಸಮೀಪದ ಕಂದಕೂರ ಗ್ರಾಮದಲ್ಲಿ ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ ಕುಸಿದು ಮೃತಟ್ಟಿದ್ದ ಮಹಿಳೆಯ
ಕುಟುಂಬಕ್ಕೆ ಗುರುಮಠಕಲ್ ಶಾಸಕ ನಾಗನ ಗೌಡ ಕಂದಕೂರ ಅವರು ಶನಿವಾರ ರೂ. 5ಲಕ್ಷ ಪರಿಹಾರ ಧನ ಚೆಕ್‌ನ್ನು ತಮ್ಮ
ನಿವಾಸದಲ್ಲಿ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮುಂಗಾರು ಆರಂಭದಲ್ಲಿಯೇ ನಿರಂತರವಾಗಿ ಸುರಿದ ಭಾರೀ ಮಳೆಗೆ ಮನೆ ಕುಸಿದು ಸಾವಿತ್ರಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು ಅತ್ಯಂತ ನೋವಿನ ಸಂಗತಿ ಎಂದರು. ತೀರಾ ಹಳೆಯದಾದ ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರು ಮಳೆಗಾಲದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಹಳೆಯ ಹಾಗೂ ಶಿಥಿಲ ಮನೆಗಳು ತುಂಬಾ ಅಪಾಯಕಾರಿ ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಕಿವಿ ಮಾತು ಹೇಳಿದರು.
ಕಳೆದ ಜು-19ರಂದು ಸುರಿದ ಭಾರೀ ಮಳೆಗೆ ಜು-20ರಂದು ಮನೆ ಕುಸಿದು ಮಹಿಳೆ ಮೃತಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಿ ಹಾನಿಗೊಳಗಾದ ಕುಟುಂಬಕ್ಕೆ ಪ್ರಕೃತಿ ವಿಕೋಪ ಅಡಿಯಲ್ಲಿ ಪರಿಹಾರ ಧನ ಮಂಜೂರಾತಿ ಮಾಡಿಸಲಾಗಿತ್ತು. ಪರಿಹಾರದ ಮೊತ್ತ ರೂ. 5ಲಕ್ಷದ ಪರಿಹಾರದ ಮೊತ್ತದ ಚೆಕ್‌ನ್ನು ಮೃತ ಮಹಿಳೆಯ ಗಂಡನಾದ ಶಿವಣ್ಣ ಕಂದಕೂರ ಅವರಿಗೆ ನೀಡಲಾಯಿತು ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಸುಭಾಷ, ಗ್ರಾಮದ ಮುಖಂಡರಾದ ಅಶೋಕರೆಡ್ಡಿ, ಸಾಬಣ್ಣ, ನಿಂಗಪ್ಪ, ಬಾಬು, ನರಸಪ್ಪ, ಭಾಸ್ಕರ್ ಸೇರಿದಂತೆ ಮುಂತಾದವರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss