Tuesday, August 16, 2022

Latest Posts

ಕಂಪನಿಗಳು ರೈತರಿಗೆ ಗುಣಮಟ್ಟದ ಯಂತ್ರಗಳನ್ನು ನೀಡಬೇಕು : ಜಯಮುತ್ತು

ಚನ್ನಪಟ್ಟಣ: ರೈತರಿಗೆ ನೆರವಾಗುವ ಗುಣಮಟ್ಟದ ಯಂತ್ರೋಪಕರಣಗಳನ್ನು ನೀಡುವುದರ ಮುಖಾಂತರ ತಮ್ಮ ಕಂಪನಿಗಳು ಪ್ರಸಿದ್ದಿ ಪಡೆಯಲಿ ಎಂದು ಬಮೂಲ್ ನಿರ್ದೇಶಕ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ತಿಳಿಸಿದರು.
ಅವರ ನಗರದ ಹನುಮಂತನಗರದಲ್ಲಿ ತೆರೆದಿರುವ ಹೈಟೆಕ್ ಅಗ್ರಿಟೂಲ್ಸ್ ಯಂತ್ರೋಪಕರಣದ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಬಹುಪಾಲು ಕೃಷಿ ಹೈನುಗಾರಿಕೆ ಹಾಗೂ ತೋಟಗಾರಿಕೆಯನ್ನೇ ಅವಲಂಭಿಸಿರುವ ಕುಟುಂಬಗಳಿದ್ದು, ಆಧುನಿಕ ಬೇಸಾಯದ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ ಅವರಿಗೆ ಸೂಕ್ತ ತರಬೇತಿಗಳ ಅವಶ್ಯಕತೆ ಇದೆ, ಅಲ್ಲದೆ ಬೇಸಾಯದಲ್ಲಿ ಆಧುನಿಕ ವೈಜ್ಞಾನಿಕ ಉಪಕರಣಗಳು ಅತ್ಯಗತ್ಯವಾಗಿವೆ ಎಂದರು.
ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೈಟೆಕ್ ಅಗ್ರಿಟೂಲ್ಸ್ ಯಂತ್ರೋಪಕರಣಗಳ ಮಳಿಗೆ ಪ್ರಾರಂಭ ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ರೈತರಿಗೆ ವಿವಿಧ ಇಲಾಖೆಗಳ ಸಹಕಾರ ಸಬ್ಸಿಡಿ ಮೂಲಕವಾಗಲೀ ಇಲ್ಲ ನೇರ ಖರೀದಿ ಮುಖಾಂತರವಾಗಿ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ನಿಖರ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡಬೇಕೆಂದರು.
ಮಳಿಗೆಯಲ್ಲಿ 25 ರೀತಿಯ ಕೃಷಿ ಚಟುವಟಿಕೆಯ ಯಂತ್ರೋಪಕರಣಗಳು ಲಭ್ಯವಾಗುತ್ತಿದ್ದು ರೈತಾಪಿವರ್ಗದವರು ಇದರ ಸದುಪಯೋಗ ಪಡದುಕೊಂಡು ಪ್ರಗತಿಪಥದತ್ತ ನಡೆಯಬೇಕು ಎಂದು ತಿಳಿಸಿದ ಅವರು, ಕೊರೊನಾ ವೈರಸ್‌ನಂತರ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಸಾಯವನ್ನು ಚುರುಕುಗೊಳಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಳಿಗೆಯ ಮಾಲೀಕ ವರದೇಗೌಡ, ಸೇಲ್ಸ್ಮೆನ್ ಸುರೇಂದ್ರ, ಅಸ್ಕವರ್ಣ ಕಂಪನಿಯ ವ್ಯವಸ್ಥಾಪಕ ವೆಂಕಟೇಶ್, ಮುಖಂಡರುಗಳಾದ ಬಾಲೇಶ್, ಶೇಖರ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss