ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ಮಂಜಾನೆ ನಿಧನ ರಾದ ಪತ್ರಕರ್ತ ರವಿಬೆಳಗೆರೆ ಅವರ ಅಂತಿಮ ವಿಧಿವಿಧಾನವು ಬನಶಂಕರಿ ಚಿತಾಗಾರದಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಕಳೆದ ನಿನ್ನೆಯ ಮಧ್ಯರಾತ್ರಿ ಪದ್ಮನಾಭ ಕಚೇರಿಯಲ್ಲಿ ಹೃದಯಾಘಾತಕ್ಕೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಒಳಗಾಗಿದ್ದರು. ಆಸ್ಪತ್ರೆಗೆ ಕೂಡಲೇ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಇಂತಹ ರವಿ ಬೆಳಗೆರೆಯವರ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿ, ಬನಶಂಕರಿಯ ಚಿತಾಗಾರದಲ್ಲಿ ಅವರ ಕುಟುಂಬಸ್ಥರ ವಿಧಿವಿಧಾನದ ನಂತ್ರ ಪಂಚಭೂತಗಳಲ್ಲಿ ಲೀನರಾದರು. ಈ ಮೂಲಕ ಹಾಯ್ ಬೆಂಗಳೂರು ಪತ್ರಿಕೆ ರವಿ ಬೆಳಗೆರೆ ಬಾರದ ಲೋಕಕ್ಕೆ ತೆರಳಿದ್ದಾರೆ.