ಕಟೀಲು ದೇಗುಲದಿಂದ ಬಡವರಿಗೆ ಆಹಾರ ವ್ಯವಸ್ಥೆ!

0
1098

ಕಟೀಲು: ಕಂದಾಯ ಅಧಿಕಾರಿಗಳು ಕಟೀಲಿನಲ್ಲಿ ಒಟ್ಟು 36 ಜನರನ್ನು ನಿರ್ಗತಿಕರೆಂದು ಗುರುತಿಸಿ ಅವರಿಗೆ ಗ್ರ್ಯಾಂಡ್ ಕಟೀಲ್ ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದಾರೆ. ಇವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಲಯದಿಂದ ಆಹಾರ ಒದಗಿಸಲಾಗುವುದು ಎಂದು ದೇಗುಲದ ಮೂಲಗಳು ತಿಳಿಸಿವೆ.

ಇದಲ್ಲದೆ ಕಟೀಲು ದೇಗುಲದಿಂದ ಜಿಲ್ಲಾಡಳಿತದ ಸೂಚನೆಯಂತೆ ಈಗಾಗಲೇ ಮಂಗಳೂರಿಗೆ ಸೂಚಿತ ದಿನಸಿ ಸಾಮಾಗ್ರಿಗಳನ್ನು ನೀಡಲಾಗಿದ್ದು, ಅಗತ್ಯವಿದ್ದರೆ 16 ಟನ್ ಗಳಷ್ಟು ಅಕ್ಕಿಯ ದಾಸ್ತಾನಿರುವ ಮಾಹಿತಿಯನ್ನೂ ಜಿಲ್ಲಾಡಳಿತಕ್ಕೆ ದೇಗುಲದಿಂದ ನೀಡಲಾಗಿದೆ.

LEAVE A REPLY

Please enter your comment!
Please enter your name here