Sunday, June 26, 2022

Latest Posts

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕೊರೋನಾ ಲಾಕ್ ಡೌನ್ ನಿಂದ ನಿಂತಿದ್ದ ಅನ್ನಪ್ರಸಾದ ಸೇವೆ ಪುನಾರಂಭ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಲಾಕ್‌ಡೌನ್ ಕಾರಣದಿಂದ ಮಾರ್ಚ್ ತಿಂಗಳಿನಿಂದ ನಿಂತಿದ್ದ ಅನ್ನಪ್ರಸಾದ ಆರಂಭಗೊಂಡಿದೆ. ಇಂದು ಮೂರು ಸಾವಿರಕ್ಕೂ ಹೆಚ್ಚಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದ್ಯಕ್ಕೆ ಬಫೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಾಳೆಯ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ,
೩೦೦೦ಕ್ಕೂ ಹೆಚ್ಚು ಹೂವಿನ ಪೂಜೆ, ೧೫೦೦ ರಷ್ಟು ಕುಂಕುಮಾರ್ಚನೆ ಸೇವೆಗಳು ನಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಸೇವೆಗಳು ಮಾತ್ರ ನಡೆದಿವೆ. ಬಸ್ಸು ಮುಂತಾದ ವಾಹನಗಳ ಓಡಾಟ ಕಡಿಮೆ ಇದ್ದುದರಿಂದ ಮತ್ತು ಈ ಬಾರಿ ಬ್ರಹ್ಮಕಲಶೋತ್ಸವದ ಸಂದರ್ಭ ರಥಬೀದಿ ಸಾಕಷ್ಟು ವಿಸ್ತಾರಗೊಂಡು ಪಾರ್ಕಿಂಗ್ ವ್ಯವಸ್ಥೆ ಆಗಿರುವುದರಿಂದ ಈ ಹಿಂದೆ ಸಾಮಾನ್ಯವಾಗಿದ್ದ ರಸ್ತೆ ಬ್ಲಾಕ್ ಸಮಸ್ಯೆ ನಿವಾರಣೆಯಾಗಿದೆ.
ಶ್ರಾವಣದ ಕೊನೆಯ ಶುಕ್ರವಾರವಾದ ಇಂದು ಏಳು ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದು ದಿನವಿಡೀ ಮಳೆ ಸುರಿಯುತ್ತಿದ್ದರು ಸಾಮಾಜಿಕ ಅಂತರಕ್ಕಾಗಿ ಸರತಿಸಾಲಿನ ವ್ಯವಸ್ಥೆ ಮಾಡಿರುವುದರಿಂದ ರಥಬೀದಿಯಲ್ಲಿ ಕೊಡೆಹಿಡಿದೇ ಕ್ಯೂ ನಿಂತು ದೇವಸ್ಥಾನಕ್ಕೆ ಭಕ್ತರ ಸಾಲು ಸಾಗುತ್ತಿದ್ದುದು ಕಂಡು ಬಂತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss