Sunday, June 26, 2022

Latest Posts

ಕಟ್ಟಡದ ಚಾವಣಿ ಕುಸಿದು ನಾಲ್ವರು ಸಾವು: ಆರು ಮಂದಿಗೆ ಗಂಭೀರ ಗಾಯ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದೆಹಲಿಯಲ್ಲಿ ಕಟ್ಟಡದ ಚಾವಣಿ ಕುಸಿದು ನಾಲ್ವರು ಮೃತಪಟ್ಟಿದ್ದಾರೆ.
ಪಶ್ಚಿಮ ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ ಚಾವಣಿ ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಅಗ್ನಿಶಾಮಕ ದಳಕ್ಕೆ ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ಬಂದಿದ್ದು, ನಾಲ್ಕು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡವನ್ನು ಮೋಟಾರ್ ವೈಂಡಿಂಗ್ ಫ್ಯಾಕ್ಟರಿಯಾಗಿ ಬಳಸಲಾಗುತ್ತಿತ್ತು. ಘಟನೆ ನಡೆದ ವೇಳೆ ಆರು ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss