ಹೊಸ ದಿಗಂತ ಆನ್ಲೈನ್ ಡೆಸ್ಕ್:
ಭಯೋತ್ಪಾದಕರಿಗೆ ಭಯ ಹುಟ್ಟಿಸುವ ಕಾರ್ಯ ಮುಂದುವರಿಸಿರುವ ಭಾರತೀಯ ಸೇನೆ, ಈಗ ಕಟ್ಟಡ, ಕತ್ತಲು ಕೋಣೆಯಲ್ಲಿ ಅಡಗಿದ್ದರೂ ಹುಡುಕಿ ಹೆಡೆಮುರಿಕಟ್ಟಲು ‘ಮೈಕ್ರೋ ಕಾಪ್ಟರ್’ನ್ನು ಅಭಿವೃದ್ಧಿ ಪಡಿಸಿದೆ.
ವಿಶೇಷವೆಂದರೆ ಇದನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಜಿವೈಕೆ ರೆಡ್ಡಿಯವರೇ ಖುದ್ದಾಗಿ ಮತ್ತು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಿರುವುದು. ಈ ಮೈಕ್ರೋ ಕಾಪ್ಟರ್ನ್ನು ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ವಿಶೇಷ ಪಡೆಗಳ ಬೆಟಾಲಿಯನ್ ಪ್ರಾಯೋಗಿ ಪರೀಕ್ಷೆ ನಡೆಸಿದ್ದು, ಪರೀಕ್ಷೆಯ ಸಂದರ್ಭ ಇದು ಉತ್ತಮ ಫಲಿತಾಂಶ ನೀಡಿದೆ. ಹಾಗಾಗಿ ಈಗ ಈ ಮೈಕ್ರೋ ಡ್ರೋನ್ನಲ್ಲಿಯೇ ಹೆಚ್ಚಿನ ಸುಧಾರಣೆಗಳನ್ನು ತರಲು ನಿರ್ಧರಿಸಲಾಗಿದೆ.