ಲಾಹೋರ್: ಭಾರತದಲ್ಲಿ ಕೊರೋನಾ ವೈರಾಣು ಸೋಂಕನ್ನು ಹರಡುತ್ತಿರುವ ತಬ್ಲಿಘಿಗಳು ಕಟ್ಟರ್ ಇಸ್ಲಾಮಿಕ್ ದೇಶವಾದ ಪಾಕಿಸ್ಥಾನದಲ್ಲೂ ಅವಾಂತರ ಸೃಷ್ಟಿಸುತ್ತಿದ್ದು ಪಾಕಿಸ್ಥಾನೀಯರೂ ಈ ಮತಾಂಧ ಗುಂಪಿನ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಈಗಾಗಲೇ ೧೦ಸಾವಿರಕ್ಕೂ ಅಕ ತಬ್ಲಿಘಿಗಳನ್ನು ಪತ್ತೆಹಚ್ಚಿ ಕ್ವಾರಂಟೈನ್ನಲ್ಲಿಡಲಾಗಿದ್ದರೂ, ಇನ್ನೂ ಅನೇಕ ತಬ್ಲಿಘಿಗಳು ತಲೆಮರೆಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಈಗಾಗಲೇ ಭಾರತದಲ್ಲಿ ರಾಜಧಾನಿ ದಿಲ್ಲಿಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ತಬ್ಲಿಘಿ ಸಭೆ ನಡೆಸಿದ್ದ ರೀತಿಯಲ್ಲೇ ಪಾಕಿಸ್ಥಾನದ ರೈವಿಂಡ್ ಮರ್ಕಜ್ ನಲ್ಲಿ ಕಳೆದ ತಿಂಗಳು ತಬ್ಲಿಘಿಗಳ ಧಾರ್ಮಿಕ ಸಭೆ ನಡೆದಿದೆ. ವಿಶೇಷವೆಂದರೆ ಅಲ್ಲಿ ಕೂಡಾ ಪಂಜಾಬ್ ಸರ್ಕಾರದ ಎಚ್ಚರಿಕೆ ಹಾಗೂ ವಿರೋಧವನ್ನೂ ಲೆಕ್ಕಿಸದೆ ಈ ಸಭೆ ನಡೆದಿತ್ತು.
ಮಾ.೧೦ ರಂದು ನಡೆದ ತಬ್ಲಿಘಿಗಳ ಈ ಸಭೆಯಲ್ಲಿ ಕನಿಷ್ಟ ೭೦,೦೦೦-೮೦,೦೦೦ ಜನರು ಭಾಗವಹಿಸಿದ್ದಾರೆ ಎಂದು ಪಾಕಿಸ್ಥಾನದ ಡಾನ್ ಪತ್ರಿಕಾ ವರದಿ ತಿಳಿಸಿದ್ದರೆ, ಜಮಾತ್ನ ಮೂಲಗಳ ಪ್ರಕಾರ ಅಲ್ಲಿ ಪಾಲ್ಗೊಂಡವರ ಸಂಖ್ಯೆ ೨.೫ಲಕ್ಷಕ್ಕೂ ಹೆಚ್ಚು.ಈ ಸಭೆಯಲ್ಲಿ ೪೦ ರಾಷ್ಟ್ರಗಳಿಂದ ಬಂದಿದ್ದ ಸುಮಾರು ೩,೦೦೦ ಜನರು ಅಂತಾರಾಷ್ಟ್ರೀಯ ವಿಮಾನ ಸೌಲಭ್ಯಗಳಿಲ್ಲದೇ ತಮ್ಮ ದೇಶಕ್ಕೆ ತೆರಳಲಾಗದೇ ಈಗ ಪಾಕಿಸ್ಥಾನದಲ್ಲೇ ಬಾಕಿಯಾಗಿದ್ದಾರೆ.ಈಗ ಈ ತಬ್ಲಿಘಿಗಳು ಪಾಕಿಸ್ಥಾನಕ್ಕೂ ತಲೆನೋವಾಗಿದ್ದಾರೆ.ಅಲ್ಲಿ ಈಗಾಗಲೇ ೪೧೬೯ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ೬೦ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.