Thursday, July 7, 2022

Latest Posts

ಕಟ್ಟಿಗೆ ಆಯುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ: ಕಾಲು ಮುರಿತ

ಹೊಸದಿಗಂತ ವರದಿ, ಕೊಡಗು:

ಕಟ್ಟಿಗೆ ಆಯುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ತಿತಿಮತಿ ಸಮೀಪದ ದೇವಮಚ್ಚಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಅಲ್ಲಿನ ರೇಷ್ಮೆ ಹಡ್ಲು ಕೆಸುವಿನ ಕೆರೆ ಹಾಡಿಯ ನಿವಾಸಿ ರಾಮು (45) ಎಂಬವರು ಸಂಜೆ 4 ಗಂಟೆ ಸಮಯದಲ್ಲಿ ಮನೆ ಪಕ್ಕದಲ್ಲಿ ಕಟ್ಟಿಗೆ ಆಯುತ್ತಿದ್ದಾಗ ದಿಢೀರನೆ ಆನೆ ದಾಳಿ ನಡೆಸಿದೆ.

ಈ ಸಂದರ್ಭ ಕಾಡಾನೆಯ ತುಳಿತಕ್ಕೆ ಸಿಲುಕಿದ ರಾಮು ಅವರ ಕಾಲು ಮುರಿದಿದ್ದು, ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss