ಕಠ್ಮಂಡು: ಮುಂಜಾನೆ ನೇಪಾಳದ ಕಠ್ಮಂಡುವಿನಲ್ಲಿ ಭೂಮಿ ನಡುಗಿದೆ.
ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ನೇಪಾಳದ ಕಠ್ಮಂಡುವಿನ 50ಕಿ.ಮೀ. ಪೂರ್ವ ಭಾಗದಲ್ಲಿ ಇಂದು ಬೆಳಗ್ಗೆ 5.04ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.4 ಆಗಿದೆ. ಈ ಪ್ರದೇಶದಲ್ಲಿ ಸುಮಾರು 4.5 ಮಿಲಿಯನ್ ಜನಸಂಖ್ಯೆ ಇರುವ ಪ್ರದೇಶ ಇದಾಗಿದೆ ಎನ್ನಲಾಗಿದೆ.
ನೇಪಾಳದ ಮಧ್ಯಮಾಂಚಲ, ಕಥಾರಿ,ಕ್ಸಿಜಾಂಗ್-ನೇಪಾಳ ಗಡಿ ಪ್ರದೇಶ,ಧೂಮ್ತಂಗ್ ಮುಂತಾದ ಪ್ರದೇಶಗಳಲ್ಲಿ ಭೂಮಿ ನಡುಗಿದೆ. ತೀವ್ರತೆ ಎಷ್ಟಿತ್ತೆಂದರೆ ಜನ ಮನೆಯಿಂದ ಹೊರಬಂದರು ಎನ್ನಲಾಗಿದೆ.