Monday, August 15, 2022

Latest Posts

ಕಡಬ- ಪುತ್ತೂರು ತಾಲೂಕುಗಳಲ್ಲಿ ಗುರುವಾರ 14 ಮಂದಿಯಲ್ಲಿ ಕೊರೋನಾ ಪ್ರಕರಣ ದೃಢ

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ ೧೪ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಪುತ್ತೂರು ನಗರದ ಕರ್ಮಲ ನಿವಾಸಿ ೪೩ ವರ್ಷದ ಮಹಿಳೆ, ತೆಂಕಿಲ ನಿವಾಸಿಗಳಾದ ೭೨ ವರ್ಷದ ಪುರುಷ, ೫೮ ವರ್ಷದ ಪುರುಷ, ಬಪ್ಪಳಿಗೆ ನಿವಾಸಿ ೫೬ ವರ್ಷದ ಮಹಿಳೆ, ನೆಹರೂನಗರ ನಿವಾಸಿ ೪೦ ವರ್ಷದ ಪುರುಷ, ಮೊಟ್ಟೆತ್ತಡ್ಕ ನಿವಾಸಿ ೪೫ ವರ್ಷದ ಮಹಿಳೆ, ದರ್ಬೆ ನಿವಾಸಿ ೨೪ ವರ್ಷದ ಯುವಕ, ಬನ್ನೂರು ನಿವಾಸಿ ೨೨ ವರ್ಷದ ಯುವಕ, ಕೃಷ್ಣನಗರ ನಿವಾಸಿ ೬೮ ವರ್ಷದ ಪುರುಷ, ೩೪ನೇ ನೆಕ್ಕಿಲಾಡಿ ನಿವಾಸಿ ೩೬ ವರ್ಷದ ಪುರುಷ, ಕುಂಬ್ರ ನಿವಾಸಿ ೬೨ ವರ್ಷದ ಮಹಿಳೆ, ಕಾವು ಮಾಡ್ನೂರು ನಿವಾಸಿ ೫೫ ವರ್ಷದ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ.
ಕಡಬ ತಾಲೂಕಿನಲ್ಲಿ
ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ ೨೫ ವರ್ಷದ ಯುವತಿ, ಕೌಕ್ರಾಡಿ ನಿವಾಸಿ ೨೦ ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಇಲ್ಲಿಯವರೆಗೆ ಒಟ್ಟು ೪೨೪ ಕೊರೋನಾ ಪ್ರಕರಣಗಳು ವರದಿಯಾಗಿವೆ. ಉಭಯ ತಾಲೂಕುಗಳಲ್ಲಿ ಒಟ್ಟು ೬ ಮಂದಿ ಸಾವನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss