Monday, August 8, 2022

Latest Posts

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ 15 ಕೊರೋನಾ ಪ್ರಕರಣ

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಶನಿವಾರ ಒಟ್ಟು 15 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ.
ಪುತ್ತೂರು ತಾಲೂಕಿನಲ್ಲಿ

ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ 59 ವರ್ಷದ ಪುರುಷ, ಕೆದಂಬಾಡಿ ಗ್ರಾಮದ 27 ವರ್ಷದ ಯುವತಿ, ಉಪ್ಪಿನಂಗಡಿಯ 48 ವರ್ಷದ ಪುರುಷ, 34ನೇ ನೆಕ್ಕಿಲಾಡಿ ಗ್ರಾಮದ 37 ವರ್ಷದ ಮಹಿಳೆ, ಪುತ್ತೂರು ನಗರಸಭಾ ವ್ಯಾಪ್ತಿಯ ಕರ್ಮಲದ 53 ವರ್ಷದ ಪುರುಷ, ನೆಹರೂನಗರದ 57 ಮಹಿಳೆ, ಕಾವು ಮಾಡ್ನೂರು ಗ್ರಾಮದ 42 ವರ್ಷದ ಪುರುಷರಲ್ಲಿ ಕೊರೊನಾ ದೃಡಪಟ್ಟಿದೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಒಂದೇ ಮನೆಯ 75 ವರ್ಷದ ಪುರುಷ, 45 ವರ್ಷದ ಪುರುಷ, 28 ವರ್ಷದ ಯುವತಿ, 68 ವರ್ಷದ ಮಹಿಳೆ, ಕಾಣಿಯೂರು ಗ್ರಾಮದ ಕೈಮಜಲು ನಿವಾಸಿಗಳಾದ ಒಂದೇ ಮನೆಯ 65 ವರ್ಷದ ಮಹಿಳೆ, 23 ವರ್ಷದ ಯುವತಿ, 20 ವರ್ಷದ ಯುವತಿ, ಕಾಣಿಯೂರು ಗ್ರಾಮದ ಬೆಜಂಗಳ ನಿವಾಸಿ 15 ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಈ ತನಕ ಒಟ್ಟು 373 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss