ಹೊಸದಿಗಂತ ಆನ್ ಲೈನ್ ಡೆಸ್ಕ್:
ತಿರುವನಂತಪುರಂ ಸಮುದ್ರ ತೀರದಲ್ಲಿ ಸರ್ಕಾರಿ ಸ್ವಾಮ್ಯದ ಟೈಟಾನಿಯಮ್ ಉತ್ಪನ್ನಗಳ ಸಂಸ್ಥೆ (ಟಿಟಿಪಿ)ಯ ಫರ್ನೇಸ್ ತೈಲ ಸೋರಿಕೆಯಾಗಿದೆ.
ಗಾಜಿನ ಫರ್ನೇಸ್ ನಿಂದ ಸುಮಾರು 2 ಕಿ.ಮೀ ವರೆಗಿನ ಪ್ರದೇಶಕ್ಕೆ (ವೇಲಿ-ಪುತುಕುರಿಚಿವರೆಗಿನ ಪ್ರದೇಶ) ತೈಲ ಸೋರಿಕೆಯಾಗಿದೆ. ಮಧ್ಯರಾತ್ರಿಯ ವೇಳೆಗೆ ಸಮುದ್ರಕ್ಕೆ ಒಳಚರಂಡಿಯ ಮೂಲಕ ತೈಲ ಸೋರಿಕೆ ಪ್ರಾರಂಭವಾಗಿದ್ದು, ಸಮುದ್ರದ ತೀರದಲ್ಲಿರುವ ಮರಳಿನೊಂದಿಗೆ ತೈಲ ಸೇರಿದೆ.
ಈ ಕುರಿತು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೋರಿಕೆಯನ್ನು ತಡೆಯಲಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ಕಡಲ ಪ್ರದೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಟೈಟಾನಿಯಮ್ ಉತ್ಪನ್ನಗಳ ಸಂಸ್ಥೆ ಟೈಟಾನಿಯಮ್ ಡೈಯಾಕ್ಸೈಡ್ ತಾರಿಸುವ ಸಂಸ್ಥೆಯಾಗಿದೆ.