Sunday, June 26, 2022

Latest Posts

ಕಡಲಲ್ಲಿ ಎರಡು ದಿನ ಮೀನುಗಾರನ ಜೀವನ್ಮರಣ ಹೋರಾಟ: ಕೊನೆಗೂ ಸಿಕ್ಕಿತು ಮೋಂತಿ ಫೆಸ್ಟ್ ಗಿಫ್ಟ್

ಉಡುಪಿ: ಮೂರು ದಿನಗಳ ಹಿಂದೆ ಮಂಗಳೂರಿನ ಉಳ್ಳಾಲದಿಂದ ಪರ್ಸಿನ್ ಬೋಟಿನ ಡಿಂಗಿ ದೋಣಿ ತಪ್ಪಿಹೋಗಿ ಸಮುದ್ರದಲ್ಲೇ ಇದ್ದ ಮೀನುಗಾರರೊಬ್ಬರನ್ನು ಮಲ್ಪೆಯ ಸೀಗಲ್ ಪರ್ಸಿನ್ ಬೋಟಿನವರು ರಕ್ಷಿಸಿದ್ದಾರೆ.

ಉಳ್ಳಾಲ ಹೊಗೈಬಜಾರ್ ನಿವಾಸಿ ಸುನೀಲ್ ಡಿಸೋಜ (45) ಮಲ್ಪೆ ಮೀನುಗಾರರಿಂದ ರಕ್ಷಿಸಲ್ಪಟ್ಟ ಮೀನುಗಾರ. ಸೆ. 6ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ಮಂಗಳೂರು ಮೀನುಗಾರಿಕಾ ಬಂದರಿನಿಂದ ಪರ್ಸಿನ್ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಅದಕ್ಕೆ ಹಿಂಬದಿಯಲ್ಲಿ ಕಟ್ಟುವ ಡಿಂಗಿ (ಸಣ್ಣ ದೋಣಿ) ದೋಣಿಯಲ್ಲಿದ್ದು ಸುನೀಲ್ ಡಿಸೋಜ ಬಲೆ ಹಾಕುತ್ತಿದ್ದರು. ಅದೇ ದಿನ ರಾತ್ರಿ 9 ಗಂಟೆಯ ಸುಮಾರಿಗೆ ಡಿಂಗಿ ದೋಣಿಯನ್ನು ಕಟ್ಟಿದ್ದ ಹಗ್ಗ ಬಿಚ್ಚಿ, ದೋಣಿ ಪ್ರತ್ಯೇಕವಾಗಿದೆ. ಡಿಂಗಿ ದೋಣಿಯಲ್ಲಿದ್ದ ಇಂಜಿನ್ ಸ್ಟಾರ್ಟ್ ಆಗದೇ ಸುನೀಲ್ ಇರುವ ದೋಣಿ ಪ್ರತ್ಯೇಕವಾಗಿ ಉಳಿದಿತ್ತು. ಪರ್ಸಿನ್ ದೋಣಿಯವರು ಹುಡುಕಾಡಿದರೂ ಡಿಂಗ್ ದೋಣಿ ಸಿಕ್ಕಿರಲಿಲ್ಲ. ಬಳಿಕ ಡಿಂಗಿ ದೋಣಿಯೊಂದು ತಪ್ಪಿಸಿಹೋಗಿರುವ ಬಗ್ಗೆ ಕರಾವಳಿ ಕಾವಲು ಪೊಲೀಸ್‌ಗೆ ಮಾಹಿತಿ ನೀಡಲಾಗಿತ್ತು.

ಸಮುದ್ರ ಮಧ್ಯದಲ್ಲಿ 36 ತಾಸು ಕಾಲ ಅತಂತ್ರ: ಈ ನಡುವೆ ಸುನೀಲ್ ಡಿಸೋಜ ಅವರು ಸಮುದ್ರದ ಮಧ್ಯೆ ಊಟ, ನೀರು ಇಲ್ಲದೇ 36 ತಾಸುಗಳನ್ನು ಕಳೆದಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸೀಗಲ್ ಪರ್ಸಿನ್ ಬೋಟಿನವರು ಡಿಂಗಿ ದೋಣಿಯೊಂದು ಅನಾಥವಾಗಿರುವುದು ಕಂಡುಬಂದಿದೆ. ಹತ್ತಿರ ಹೋಗಿ ನೋಡಿದಾಗ ಅದರಲ್ಲಿ ವ್ಯಕ್ತಿಯೊಬ್ಬರು ಕಂಡುಬಂದಿದ್ದಾರೆ. ಬಳಿಕ ತಕ್ಷಣ ಸುನೀಲ್ ಅವರನ್ನು ರಕ್ಷಿಸಿ, ತಮ್ಮ ಬೋಟಿನಲ್ಲಿ ಕರೆದು ಊಟ, ನೀರು ಕೊಟ್ಟಿದ್ದಾರೆ. ನಂತರ ಡಿಂಗಿ ದೋಣಿಯನ್ನು ಸೀಗಲ್ ಪರ್ಸಿನ್ ಬೋಟಿಗೆ ಕಟ್ಟಿಕೊಂಡು ಮಲ್ಪೆ ಮೀನುಗಾರಿಕಾ ಬಂದರಿಗೆ ತಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss