Tuesday, July 5, 2022

Latest Posts

ಮದ್ಯದ ನಶೆಯಲ್ಲಿ ಕಡಲಿಗಿಳಿದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಹೊಸದಿಗಂತ ವರದಿ, ಉಡುಪಿ

ಮದ್ಯದ ನಶೆಯೇರಿಸಿ ಕಡಲಿಗಿಳಿದ ಇಬ್ಬರಲ್ಲಿ ಒಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ನರಗುಂದ ತಾಲೂಕಿನ ಮಂಜು (38) ಎಂದು ಗುರುತಿಸಲಾಗಿದೆ. ಕುಂದಾಪುರದ ಎಂಕೋಡಿ (ಮದ್ಯಕೋಡಿ) ಎಂಬಲ್ಲಿ ಸಮುದ್ರ ಕಿನಾರೆಗೆ ಮಂಜು, ದಂಪತಿ ಜೊತೆಗೆ ತೆಳಿದ್ದರು. ಮಂಜು ಮದ್ಯ ಸೇವಿಸಿದ್ದರು. ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಸಮುದ್ರಕ್ಕಿಳಿದು ಈಜುತ್ತಿದ್ದರೆ, ಮಹಿಳೆ ಕಿನಾರೆಯಲ್ಲಿದ್ದರು. ಅಬ್ಬರದ ಅಲೆಗೆ ಸಿಲುಕಿದ ಮಂಜು ನೀರಿನಲ್ಲಿ ಮುಳುಗಿದ್ದನ್ನು ಗಮನಿಸಿ, ಜೊತೆಯಲ್ಲಿದ್ದ ವ್ಯಕ್ತಿ ರಕ್ಷಣೆಗೆ ಮುಂದಾಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಸಮುದ್ರದ ನೀರಲ್ಲಿ ಮುಳುಗೇಳುತ್ತಿದ್ದವರನ್ನು ಕಂಡ ಸ್ಥಳೀಯರಾದ ಹಸೈನಾರ್, ಝೈನ್, ನಾಗರಾಜ್ ಕೋಡಿ, ವೆಂಕಟೇಶ್ ಕೋಡಿ, ಸಲಾಂ ಎಂಬವರು ನೀರಿಗೆ ಹಾರಿ ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ. ಆದರೆ ಅದರಲ್ಲಿ ಮಂಜು ಮೃತಪಟ್ಟಿದ್ದರು. ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss