ಹೊಸದಿಗಂತ ಆನ್ಲೈನ್ ಡೆಸ್ಕ್:
ಅಂತಾರಾಷ್ಟ್ರೀಯ ಕಡಲ ಗಡಿರೇಖೆ ಅತಿಕ್ರಮಣ ಮಾಡಿದ ಒಂಬತ್ತು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಯಾಂತ್ರಿಕೃತ ದೋಣಿಯ ಮಾಲೀಕರಾದ ಎ ಕಿರುಬಾಯಿ (37) ಎಸ್ ವಾಲನ್ ಕೌಶಿಕ್ (24), ಮೈಕಿಯಾಸ್ (30), ಎ ಕೆನ್ನಿಂಗ್ಸ್ಟನ್ (28), ಆರ್ ಸ್ಯಾಮ್ ಸ್ಟಿಲ್ಲರ್ (20), ಎ ನಿಜಾನ್ (30), ಬ್ರೈಟನ್ (20), ಆರ್ ಕಿಶೋರ್ (27) ಮತ್ತು ಮಾರಿ (45). ಅವರನ್ನು ಶ್ರೀಲಂಕಾ ನೌಕಾಪಡೆ ಕಚ್ಚಾಹೀವು ಬಳಿ ಬಂಧಿಸಿದೆ.
ಈ ಬಂಧನ ಖಂಡಿಸಿ ಭಾನುವಾರ ಮಧ್ಯಾಹ್ನ ಮೀನುಗಾರರು ಅನಿರ್ಧಿಷ್ಟಾವಧಿ ಮುಷ್ಕರ ಘೋಷಿಸಿದ್ದಾರೆ.
ಐಎಂಬಿಎಲ್ನ್ನು ಅತಿಕ್ರಮಣ ಮಾಡಿಕೊಂಡು ಕಾಟ್ಟತೀವು ಬಳಿ ಮೀನುಗಾರಿಕೆ ನಡೆಸಿದ್ದಾಕಿ ರಾಮೇಶ್ವರಂನ ಮೀನುಗಾರರನ್ನು ಬಂಧಿಸಲಾಗಿದೆ.