ವೆಜ್ ಅಥವಾ ನಾನ್ವೆಜ್ ಆಗಿರಲಿ ಘೀ ರೈಸ್ ಜೊತೆಯಲ್ಲಿ ಇದ್ದರೆ ಅದರ ಆನಂದವೇ ಬೇರೆ. ರೈಸ್ನಲ್ಲಿ ಹಲವಾರು ವೆರೈಟಿ ಇದ್ದರೂ ಘೀರೈಸ್ ಎಲ್ಲಕ್ಕಿಂತ ಒಂದು ಸ್ಟೆಪ್ ಮುಂದೆಯೇ ಇದೆ. ಶುದ್ಧ ತುಪ್ಪ ಬಳಸಿ ಮಾಡುವುದರಿಂದ ಅದು ಆರೋಗ್ಯಕ್ಕೂ ಒಳ್ಳೆಯದು. ಕಡಿಮೆ ಸಾಮಾಗ್ರಿಗಳನ್ನು ಬಳಸಿ,ವೇಗವಾಗಿ ಮಾಡಬಹುದಾದ ಘೀರೈಸ್ ರೆಸಿಪಿ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು
- ಅರ್ಧ ಕಪ್ ಬಾಸುಮತಿ ರೈಸ್
- ಒಂದು ಮೊಟ್ಟೆ( ಬೇಕಾದರೆ ಬಳಸಿ)
- ದ್ರಾಕ್ಷಿ, ಗೋಡಂಬಿ
- ಎರಡು ಸ್ಪೂನ್ ತುಪ್ಪ
- ಹತ್ತು ಕಾಳುಮೆಣಸು
- ಎರಡು ಎಳೆ ಕರಿಬೇವು
- ಮೆಣಸಿನಕಾಯಿ ಎರಡು
- ಬೆಳ್ಳುಳ್ಳಿ ಒಂದು
- ಈರುಳ್ಳಿ ಒಂದು
- ಉಪ್ಪು
- ಚಕ್ಕೆ,ಲವಂಗ,ಏಲಕ್ಕಿ, ಚಕ್ರಮೊಗ್ಗು
ಮಾಡುವ ವಿಧಾನ - ಅಡುಗೆ ಆರಂಭಕ್ಕೆ ಮುನ್ನ ಅಕ್ಕಿ ತೊಳೆದು ನೆನೆಸಿಟ್ಟುಕೊಳ್ಳಿ
- ಕುಕ್ಕರ್ಗೆ ಒಂದುವರೆ ಸ್ಪೂನ್ ತುಪ್ಪ ಹಾಕಿಕೊಳ್ಳಿ, ಬಿಸಿಯಾದ ನಂತರ ಇದಕ್ಕೆ ದ್ರಾಕ್ಷಿ ಗೋಡಂಬಿ ಹಾಕಿ ಇದನ್ನು ತೆಗೆದು ಪಕ್ಕದಲ್ಲಿ ಇಟ್ಟುಕೊಳ್ಳಿ.
- ನಂತರ ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿ ಇದನ್ನು ತೆಗೆದಿಟ್ಟುಕೊಳ್ಳಿ. ನಂತರ ಪಾತ್ರೆಗೆ ಇನ್ನು ಸ್ವಲ್ಪ ತುಪ್ಪ,ಮೆಣಸಿನಕಾಯಿ,ಮಸಾಲಾ ಪದಾರ್ಥ ಎಲ್ಲವನ್ನೂ ಹಾಕಿ
- ಈ ಮಿಶ್ರಣಕ್ಕೆ ಅಕ್ಕಿಹಾಕಿ, ಎರಡರಿಂದ ಮೂರು ನಿಮಿಷ ಚೆನ್ನಾಗಿ ಫ್ರೈ ಮಾಡಿ.
- ಈ ಮಿಶ್ರಣಕ್ಕೆ ಒಂದು ಮುಕಕಾಲು ಕಪ್ ನೀರು ಹಾಕಿ ಉಪ್ಪು ಹಾಕಿ, ಉಪ್ಪು ಸ್ವಲ್ಪ ಜಾಸ್ತಿಯೇ ಇರಲಿ.
- ಒಂದು ವಿಶಲ್ ಆದ ನಂತರ ಇದಕ್ಕೆ ಹುರಿದಿಟ್ಟ ದ್ರಾಕ್ಷಿ ಗೋಡಂಬಿ, ಈರುಳ್ಳಿ ಹಾಕಿದರೆ ಬಿಸಿಬಿಸಿ ಘೀ ರೈಸ್ ರೆಡಿ