ಹೊಸದಿಲ್ಲಿ: ಒಂದೆಡೆ ಕೃಷಿ ಮಸೂದೆಗಳಿಗೆ ಕೆಲವೊಂದು ರಾಜ್ಯಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೆ ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದೆ.
ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಪ್ರಕಾರ ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಬೆಳೆ ಖರೀದಿ ಮುಂದುವರೆಸಿದೆ ಎಂದು ತಿಳಿಸಿದೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದಲ್ಲಿ ಕೆಎಂಎಸ್ 2020-21ರಲ್ಲಿ 14.09 ಎಲ್ಎಂಟಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದೆ.
Upto 28th September 2020, paddy procurement totalling 16,420 MT having MSP value of Rs. 31 crores done from farmers of Haryana and Punjab: Government of India https://t.co/i4WQkRXL1T
— ANI (@ANI) September 29, 2020
2020ರ ಸೆಪ್ಟೆಂಬರ್ 28ರವರೆಗೆ ಭತ್ತ ಸಂಗ್ರಹವು ಒಟ್ಟು 16,420 ಮೆಟ್ರಿಕ್ ಟನ್ ಆಗಿದ್ದು, ಹರಿಯಾಣ, ಪಂಜಾಬ್ ರೈತರಿಂದ 31 ಕೋಟಿ ರೂ ಭತ್ತ ಖರೀದಿ ಮಾಡಲಾಗಿದೆ ಎಂದು ತಿಳಿಸಿದೆ. ಮುಷ್ಕರದ ಮಧ್ಯೆ 48 ಗಂಟೆಯಲ್ಲಿ MSPಯಡಿ ₹10.53 ಕೋಟಿ ಭತ್ತ ಖರೀದಿ.. 3,961 ರೈತರಿಗೆ ಲಾಭ2020-21ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಸರ್ಕಾರವು 495.37 ಲಕ್ಷ ಟನ್ ಭತ್ತ ಖರೀದಿ ಗುರಿ ಇಟ್ಟುಕೊಂಡಿದೆ. ಭತ್ತದ ಹೊರತಾಗಿ ಸರ್ಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ ಸೆಪ್ಟೆಂಬರ್ 24ರವರೆಗೆ ತಮಿಳುನಾಡಿನ 40 ರೈತರಿಂದ 25 ಲಕ್ಷ ರೂ. ಮೌಲ್ಯದ 34.20 ಟನ್ ಬೆಳೆ ಖರೀದಿಸಿದೆ ಎಂದು ತಿಳಿಸಿದೆ.