ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್(44) ಇಂದು ನಿಧನರಾಗಿದ್ದಾರೆ.
ಬುಲೆಟ್ ಪ್ರಕಾಶ್ ಅವರು ಲಿವರ್ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯದಲ್ಲಿದ್ದ ಅವರನ್ನು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿ, ಚಿಕಿತ್ಸೆ ಫಲಿಸದೇ ಬುಲೆಟ್ ಪ್ರಕಾಶ್ ಅವರು ನಿಧನರಾಗಿದ್ದಾರೆ.
2002ರಲ್ಲಿ ದೃವ ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟ ಬುಲೆಟ್ ಪ್ರಕಾಶ್ ಅವರು ಸಿನಿಮಾ ಲೋಕದಲ್ಲಿ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದರು, 2010ರಲ್ಲಿ ಜಾಕಿ, 2015ರಲ್ಲಿ ರಾಟೆ, 2016ರಲ್ಲಿ ಜಗ್ಗು ದಾದ, 2018ರಲ್ಲಿ ಭೂತಯ್ಯನ ಮೊಮ್ಮಗ ಸೇರಿದಂತೆ 325ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿರುವ ಬುಲೆಟ್ ಪ್ರಕಾಶ್ ಅವರು ಇನ್ನು ನೆನಪು ಮಾತ್ರ.