Thursday, June 30, 2022

Latest Posts

ಕನ್ನಡ ಕಡ್ಡಾಯಕ್ಕೆ ಸರ್ಕಾರ ಬದ್ಧ: ಬಿಎಸ್ ವೈ

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರಗಿ): ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದರೊಟ್ಟಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೂ ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಸಲುವಾಗಿ  ಸಮಿತಿ ರಚಿಸಿದ್ದು, ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಆದರೆ, ಇದಕ್ಕೆ ಸಮುದಾಯದ ಬೆಂಬಲಬೇಕು. ಪೋಷಕರು ಆಸಕ್ತಿ ವಹಿಸಬೇಕು ಎಂದು ಪ್ರತಿಪಾದಿಸಿದರು.

ಭಾವೈಕ್ಯತೆಯ ತಾಣವಾದ ಪುಣ್ಯಭೂಮಿ ಕಲ್ಯಾಣಿ ಚಾಲುಕ್ಯರಿಂದ ಬಹುಮನಿ ಸುಲ್ತಾನರವರೆಗೆ ಆಳ್ವಿಕೆಗೊಳಪಟ್ಟ ಈ ಸ್ಥಳದಲ್ಲಿ ಮೂರು ಬಾರಿ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. ಹಿಂದಿನ ಸಮ್ಮೇಳನಗಳ ಸರ್ವಾಧ್ಯಕ್ಷರ ಭಾಷಣಗಳು ಸಾರ್ವಕಾಲಿಕ. ಈ ಬಾರಿಯ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ಚಿತ್ರ ಸಾಹಿತ್ಯ ಹೀಗೆ ವಿವಿಧ ಪ್ರಾಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕನ್ನಡದ ವಿಶಿಷ್ಟ ಪ್ರಾಕಾರವಾದ ಭಾವಗೀತೆಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದವರು. ಇದೊಂದು ಔಚಿತ್ಯಪೂರ್ಣ ಸಮ್ಮೇಳನವಾಗಬೇಕು ಎಂದು ಆಶಿಸಿದರು.

ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲು ಅವಕಾಶ ಮಾಡಿಕೊಟ್ಟಿರುವ ಜನತೆಗೆ ತಲೆಬಾಗಿ ವಂದಿಸುತ್ತೇನೆ. ಕಲ್ಯಾಣಿ ಚಾಲುಕ್ಯರಿಂದ ಬಹುಮನಿ ಸುಲ್ತಾನರವರೆಗೆ ಆಳ್ವಿಕೆಗೊಳಪಟ್ಟ ಈ ಸ್ಥಳದಲ್ಲಿ ಈ ಹಿಂದೆ ಮೂರು ಬಾರಿ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. ಹಿಂದಿನ ಸಮ್ಮೇಳನಗಳ ಸರ್ವಾಧ್ಯಕ್ಷರ ಭಾಷಣಗಳು ಸಾರ್ವಕಾಲಿಕ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ಚಿತ್ರ ಸಾಹಿತ್ಯ ಹೀಗೆ ವಿವಿಧ ಪ್ರಾಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕನ್ನಡದ ವಿಶಿಷ್ಟ ಪ್ರಾಕಾರವಾದ ಭಾವಗೀತೆಗಳ ಮೂಲಕ ಜನಮಾನಸದದಲ್ಲಿ ನೆಲೆಯೂರಿದವರು. ಇದೊಂದು ಔಚಿತ್ಯಪೂರ್ಣ ಸಮ್ಮೇಳನವಾಗಬೇಕು ಎಂದು ಆಶಿಸಿದರು.

ಕಲ್ಯಾಣ ಏಳಿಗೆಗೆ ವಿಶೇಷ ಯೋಜನೆ: ಸತತ ಬರಗಾಲದಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಡಾ.ನಂಜುಂಡಪ್ಪ ವರದಿ ವಿಶೇಷ ಅಭಿವೃದ್ಧಿ ಯೋಜನೆಯನ್ನು 2006ರಿಂದ 8 ವರ್ಷಕ್ಕೆಂದು ಅನುಷ್ಠಾನಗೊಳಿಸುವ ಗುರಿಯಿತ್ತು. ಆದರೆ, ಇಂದಿಗೂ ಮುಂದುವರಿಸಬೇಕಾದ ಅನಿವಾರ್ಯುತೆ ಇದೆ.

ಸಂವಿಧಾನದ 371 (ಜೆ) ತಿದ್ದುಪಡಿ ಮೂಲಕ ಮೀಸಲಾತಿ ಕಲ್ಪಿಸಿದ್ದು, 700 ಕ್ಕೂ ಹೆಚ್ಚು ವೈದ್ಯಕೀಯ, ಸಾವಿರಾರು ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಸೀಟುಗಳು ಲಭ್ಯವಿವೆ. ಕಲಬುರಗಿ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಇಲ್ಲಿಂದ ಹೊಸದಿಲ್ಲಿಗೂ ಶೀಘ್ರದಲ್ಲೇ ವಿಮಾನ ಹಾರಾಟ ನಡೆಸಲಿವೆ. ಫೆ.7 ರಿಂದ ಬೀದರ್ ವಿಮಾನ ನಿಲ್ದಾಣ ಕೂಡ ಶುರುವಾಗಲಿದೆ. ಸಿ ಮತ್ತು ಡಿ ವೃಂದದ ಹುದ್ದೆಯಲ್ಲಿ ಮೀಸಲಾತಿ ಕೊಡಲಾಗಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ. ಕಲಬರುಗಿಯಲ್ಲಿ 500 ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಲು ಜಮೀನು ನೀಡಲಾಗಿದ್ದು, ಕೂಡಲೇ ಅನುದನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ವೈ ತಿಳಿಸಿದರು.

ರಾಜ್ಯದ ಯಾವುದೇ ಭಾಗ ಅಭಿವೃದ್ಧಿಯಿಂದ ಹಿಂದೆ ಉಳಿಯಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಆ ನಿಟ್ಟಿನತ್ತ ಪ್ರಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss