Thursday, November 26, 2020

Latest Posts

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

ಇನ್ನು ಅಮೆಜಾನ್‌ನಲ್ಲೂ ಕ್ಯಾಂಪ್ಕೋ ಕಾಳು ಮೆಣಸು, ಅಡಿಕೆ ಲಭ್ಯ

ಹೊಸದಿಗಂತ ವರದಿ, ಮಂಗಳೂರು: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕಾಳು ಮೆಣಸನ್ನು ಅಮೆಜಾನ್ ಮೂಲಕವೂ ಗ್ರಾಹಕರಿಗೆ ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,...

ಬಿಇಎಂಎಲ್ ಕಾರ್ಖಾನೆಯ ಖಾಸಗೀಕರಣ ಕೈಬಿಡಲು ಆಗ್ರಹಿಸಿ ಕಾರ್ಮಿಕರಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು ನಗರದಲ್ಲಿರುವ ಬಿಇಎಂಎಲ್ ಕಾರ್ಖಾನೆ ಖಾಸಗೀಕರಣ ಮಾಡುವುದನ್ನು ಕೈಬಿಡುವಂತೆ ಆಗ್ರಹಿಸಿ ಗುರುವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಗೇಟ್ ಬಳಿ ಜಮಾಯಿಸಿದ ಕಾರ್ಮಿಕರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಿಇಎಂಎಲ್ ಕಾರ್ಖಾನೆ...

ಕನ್ನಡ ಭವನಕ್ಕೆ ಭೂಮಿಪೂಜೆ: 40 ವರ್ಷಗಳ ಬಳಿಕ ನನಸಾಯಿತು ಬೀದರ್ ಕನ್ನಡಿಗರ ಕನಸು

ಹೊಸ ದಿಗಂತ ವರದಿ, ಬೀದರ್:

ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರ ಸಚಿವರಾದ ಪ್ರಭು ಚವ್ಹಾಣ್ ಅವರು ನ.22ರಂದು ಚಿಕ್ಕಪೇಟ ರಸ್ತೆಯ ಗುರುನಾನಕ್ ಮಂದಿರ ಹತ್ತಿರದಲ್ಲಿ ಬೀದರ ಜಿಲ್ಲೆಯ ಜನರ ಬಹುನಿರೀಕ್ಷೆಯ ಕನ್ನಡ ಭವನಕ್ಕೆ ಭೂಮಿಪೂಜೆ ನೆರವೇರಿಸಿದರು.
ಕನ್ನಡಾಂಬೆಗೆ ಜಯವಾಗಲಿ, ಕನ್ನಡ ಸಚಿವರಿಗೆ ಜಯವಾಗಲಿ, ಬಸವಣ್ಣನವರಿಗೆ ಜಯವಾಗಲಿ ಎನ್ನುವ ಘೋಷಣೆಗಳೊಂದಿಗೆ ಭೂಮಿಪೂಜೆ ನೆರವೇರಿದ್ದು ವಿಶೇಷವಾಗಿತ್ತು.
ಕರ್ನಾಟಕ ಮಾತೆಗೆ ಜಯವಾಗಲಿ, ತಾಯಿ ಭುವನೇಶ್ವರಿಗೆ ಜಯವಾಗಲಿ, ಜೈ ಶ್ರೀರಾಮ ಎಂದು ಘೋಷಣೆಗಳನ್ನು ಕೂಗಿ ಮಾತುಗಳನ್ನಾರಂಭಿಸಿದ ಸಚಿವರಾದ ಪ್ರಭು ಚವ್ಹಾಣ್ ಅವರು, ತಮ್ಮ ಮೈಯಲ್ಲಿ ಹರಿಯುತ್ತಿರುವುದು ಕನ್ನಡದ ರಕ್ತ. ಜನ್ಮನೀಡಿದ ತಾಯಿಯನ್ನು ಪ್ರೀತಿಸಿದಷ್ಟೇ ಕನ್ನಡ ಭಾಷೆಯ ಮೇಲೆ ಅಭಿಮಾನ, ಪ್ರೇಮ ಹೊಂದಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಭವನ ಆಗಬೇಕು ಎನ್ನುವ ಬೇಡಿಕೆಯು ಕಳೆದ 40 ವರ್ಷಗಳಿಂದ ಕೇಳಿ ಬರುತ್ತಿತ್ತು. ಇದು ತಮ್ಮ ಗಮನಕ್ಕೆ ಬಂದಿತು. ಮಾನ್ಯ ಮುಖ್ಯಮಂತ್ರಿಗಳೊoದಿಗೆ ಈ ಬಗ್ಗೆ ಚರ್ಚಿಸಿ ಅವರು ಸ್ಪಂದಿಸಿದ್ದರಿoದ ಕನ್ನಡ ಭವನಕ್ಕೆ 2 ಕೋಟಿ ರೂ. ಅನುದಾನ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.
ಬೀದರನ ಕನ್ನಡ ಮನಸುಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಿ, ಅವರ ಕನಸನ್ನು ನನಸು ಮಾಡಿದ್ದಕ್ಕೆ ತಮಗೆ ಬಹಳಷ್ಟು ಸಂತಸವಾಗಿದೆ ಎಂದರು. ಕಳೆದ ವರ್ಷ ಬೀದರನ ಹಿರಿಯ ಸಾಹಿತಿಗಳ ಮನೆಗೆ ಭೇಟಿ ನೀಡಿ ಅಭಿನಂದಿಸಿರುವೆ. ಈ ವರ್ಷವೂ ಅದೇ ಸಂಪ್ರದಾಯ ಮುಂದುವರೆಸಿ 20 ಜನ ಸಾಹಿತಿಗಳ ಮನೆಗೆ ಭೇಟಿ ನೀಡಿ ಕನ್ನಡ ನಾಡಿನ ಸೇವೆಯಲ್ಲಿ ತಾವು ತೊಡಗಿದ್ದಾಗಿ ತಿಳಿಸಿದರು.
ಈ ಭಾಗದ ಜನರ ಬಗ್ಗೆ ಮುಖ್ಯಮಂತ್ರಿಗಳು ಸಾಕಷ್ಟು ಕಾಳಜಿ ವಹಿಸಿದ್ದರಿಂದಲೇ ಕಲ್ಯಾಣ ಕರ್ನಾಟಕ ಪ್ರದೇಶ ನಾಮಕರಣ ಸಾಧ್ಯವಾಯಿತು. ಅನುಭವ ಮಂಟಪಕ್ಕೆ ಅನುದಾನ ಬರಲು ಸಾಧ್ಯವಾಯಿತು. ತಾವು ಕನ್ನಡ ಭವನಕ್ಕೆ ಮುಂದೆಯೂ ಸರ್ಕಾರದಿಂದ ಸಹಾಯ ಪಡೆದುಕೊಳ್ಳುವುದಾಗಿ ಸಚಿವರು ಇದೆ ವೇಳೆ ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರ ಮನಸು, ಕೆಲಸಗಳು ಕನ್ನಡ ತಾಯಿ ಸೇವೆಗೆ ಸಮರ್ಪಿತವಾಗಿವೆ. ಸಚಿವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಕ್ರಿಯಾಶೀಲರಾಗಿದ್ದರಿಂದಲೇ ಕನ್ನಡ ಭವನ ಭೂಮಿಪೂಜೆ ಕಾರ್ಯಸಾಧ್ಯವಾಗಿದೆ ಎಂದು ತಿಳಿಸಿದರು.
ಹಾರಕೂಡ ಸುಕ್ಷೇತ್ರದ ಡಾ.ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಸಚಿವರಾದ ಪ್ರಭು ಚವ್ಹಾಣ್ ಅವರು, ಮಾತೇಕೆ ಕೃತಿಯಿರಲಿ ಕೃತಿಯಲ್ಲಿ ಸೊಬಗಿರಲಿ ಎನ್ನುವ ಹಾಗೆ ಮಾತಿಗಿಂತಲೂ ಕೆಲಸಕ್ಕೆ ಅತೀ ಹೆಚ್ಚಿನ ಮಹತ್ವ ನೀಡುತ್ತಾರೆ. ಚವ್ಹಾಣ್ ಅವರು ಕನ್ನಡಭಾವ, ಕನ್ನಡ ಶ್ರದ್ಧೆ, ಕನ್ನಡ ಭಕ್ತಿಯನ್ನು ಇಟ್ಟುಕೊಂಡು ಸಚಿವರಾಗಿದ್ದಾರೆ. ಹಾರಕೂಡ ಮಠದ ಅಧಿಕಾರಿಯಾಗಿ ನೀಡದೇ ಕರ್ನಾಟಕ ಮಾತೆ ತಾಯಿ ಭುವನೇಶ್ವರಿ ಮಾತೆಯ ಪಾದದ ಸೇವಕನಾಗಿ ಕನ್ನಡ ಸೇವೆಗಾಗಿ ತಾವು ಒಂದು ಲಕ್ಷ ರೂ.ಗಳನ್ನು ಕನ್ನಡ ಭವನಕ್ಕೆ ನೀಡುತ್ತಿರುವುದಾಗಿ ತಿಳಿಸಿದರು.
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅವರು ಮಾತನಾಡಿ, ಕನ್ನಡ ಕೇವಲ ಕನ್ನಡ ಭವನದ ಭೂಮಿಪೂಜೆಯಲ್ಲೇ ಉಳಿಯುವುದಲ್ಲ, ಅದು ನಮ್ಮ ಹೃದಯದಲ್ಲಿ ಇಳಿಯಬೇಕು ಎಂದು ತಿಳಿಸಿದರು. ಸಚಿವರು ಓದುವ ಕಾಲದಲ್ಲಿ ಕನ್ನಡ ಶಾಲೆಗಳು ಕಡಿಮೆ ಇದ್ದವು. ಹೀಗಾಗಿ ಕೆಲವರು ಕನ್ನಡವನ್ನು ಕಲಿಯಲು ತಡಮಾಡಿದರು. ಕನ್ನಡ ಎಂದರೆ ಕುಣಿದಾಡುವುದೆನ್ನೆದೆ ಎಂದು ಕುವೆಂಪು ಅವರು ಹೇಳುವಂತೆ ಸಚಿವರ ಮನದಲ್ಲಿ ಅವರ ಮಾತಿನಲ್ಲಿ ಕನ್ನಡತನವನ್ನು ನೋಡುತ್ತಿದ್ದೇವೆ ಎಂದು ತಿಳಿಸಿದರು. ಒಳ ಹೊರಗೆ ಒಂದಾಗಿ ಕಪಟವಿಲ್ಲದೇ ಇರುವ ಸಚಿವರು ನಮಗೆ ಸಿಕ್ಕಿದ್ದರಿಂದ ಕನ್ನಡ ಭವನ ನಿರ್ಮಾಣ ಕಾರ್ಯ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಹುಲಸೂರ ಗುರುಬಸವೇಶ್ವರ ಸಂಸ್ಥಾನಮಠದ ಡಾ.ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಕನ್ನಡ ಅಂದರೆ ವಚನ ವಚನ ಅಂದರೆ ಕನ್ನಡ. ವಚನ ಮತ್ತು ಕನ್ನಡ ಎರಡೂ ಸೇರಿ ಹೆಸರು ಮಾಡಿದ ನಾಡು ಕರ್ನಾಟಕವಾಗಿದೆ ಎಂದರು. ಸಚಿವರಾದ ಚವ್ಹಾಣ್ ಅವರು ಮಂತ್ರಿಗಳಾಗಿ ಇರುವಾಗಲೇ ಕನ್ನಡ ಭವನ ನಿರ್ಮಾಣವಾಗಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಈ ಕನ್ನಡಭವನ ಕಟ್ಟಡ ಬೇಗನೆ ನಿರ್ಮಾಣವಾಗುವಲ್ಲಿ ಬೇಕಾಗುವ ಎಲ್ಲ ಸಹಕಾರವನ್ನು ತಾವು ಮಾಡುವುದಾಗಿ ಇದೆ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ರಹೀಂ ಖಾನ್ ಅವರು ಮಾತನಾಡಿ, ಬೀದರ ಜಿಲ್ಲೆಗೆ ಕ್ರಿಯಾಶೀಲ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬಂದಿದ್ದರಿoದ ಸಾಕಷ್ಟು ಕೆಲಸ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ ಎಂದರು. ಸಮಾರಂಭದಲ್ಲಿ ಶ್ರೀ ಉಮಾಕಾಂತ ನಾಗಮಾರಪಳ್ಳಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ, ಇದು ಕನ್ನಡ ಭವನ ಕಟ್ಟುವ ಕಾರ್ಯವಲ್ಲ, ಕನ್ನಡ ಮನಸುಗಳನ್ನು ಒಂದುಗೂಡಿಸುವ ಕಾರ್ಯ ಎಂದು ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗ ಆಗಿದ್ದ ಸಂತೋಷಕ್ಕಿAತ ಹೆಚ್ಚಿನ ಸಂತಸ ಇಂದು ಕನ್ನಡ ಭವನ ಭೂಮಿಪೂಜೆ ಕಾರ್ಯದಿಂದಾಗಿದೆ ಎಂದರು. ಕನ್ನಡ ಕೆಲಸವನ್ನು ಏನೇ ಹೇಳಿ ಮಾಡುತ್ತೇನೆ ಎಂದು ತಿಳಿಸುವ ಪ್ರಭು ಚವ್ಹಾಣ್ ಅಂತಹ ಸಚಿವರು ನಮಗೆ ಸಿಕ್ಕಿದ್ದರಿಂದಾಗಿ ಮತ್ತು ಇಂದಿನ ಕೆಲಸವನ್ನು ಇಂದೆ ಮಾಡಿ ಎಂದು ಹೇಳುವ ಜಿಲ್ಲಾಧಿಕಾರಿಗಳು ಬಂದಿದ್ದರಿAದ ಮತ್ತು ಇನ್ನೀತರ ಹಲವಾರು ಕನ್ನಡ ಮನಸುಗಳ ಸಹಕಾರದಿಂದಾಗಿ ಇಂದು ಕನ್ನಡ ಭವನ ಭೂಮಿ ಪೂಜೆ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸಿದರು.
ಕಸಾಪದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಅವರು ಮಾತನಾಡಿ, ಸಚಿವರಾದ ಪ್ರಭು ಚವ್ಹಾಣ್ ಅವರು ಇಂತಹ ಕನ್ನಡಪರ ಕಾರ್ಯಕ್ಕೆ ಸಹಕರಿಸಿದ್ದರಿಂದಲೇ ಈ ಕಾರ್ಯಕ್ರಮ ಸಾಧ್ಯವಾಗಿದೆ. ಬೀದರ ಇತಿಹಾಸದಲ್ಲಿ ದಾಖಲಾಗುವ ಮಹತ್ವದ ಕನ್ನಡಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಸಿಗಲು ಕಾರಣೀಕರ್ತರಾದ ಚವ್ಹಾಣ್ ಅವರು ಬರೀ ಪಶು ಸಂಗೋಪನೆ ಸಚಿವರಲ್ಲ, ಕನ್ನಡ ಸಚಿವರು ಎಂದು ತಿಳಿಸಿದರು.
ವಾಗ್ದಾನ: ಕನ್ನಡ ಭವನಕ್ಕೆ ತಾವು ಎರಡು ತಿಂಗಳಿನ ವೇತನ ನೀಡುವುದಾಗಿ ಸಚಿವರು ಸಮಾರಂಭದಲ್ಲಿ ತಿಳಿಸಿದರು. ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ನೀಡುವುದಾಗಿ ರಾಜಕುಮಾರ ಗಂದಗೆ ಅವರು, ಗ್ರಾಮ ಲೆಕ್ಕಿಗರ ಒಂದು ದಿನದ ವೇತನವನ್ನು ನೀಡುವುದಾಗಿ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರು ಸಮಾರಂಭದಲ್ಲಿ ವಾಗ್ದಾನ ಮಾಡಿದರು.
ಸಮಾರಂಭದಲ್ಲೇ ಚೆಕ್ ನೀಡಿದರು: ಕನ್ನಡ ಭವನ ನಿರ್ಮಾಣಕ್ಕಾಗಿ ಹಾರಕೂಡದ ಸುಕ್ಷೇತ್ರದ ಡಾ.ಚೆನ್ನವೀರ ಶಿವಾಚಾರ್ಯಾರು ಸಮಾರಂಭದಲ್ಲಿ ಒಂದು ಲಕ್ಷ ರೂ.ಗಳನ್ನು ಸಚಿವರ ಮೂಲಕ ಕಸಾಪ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಮತ್ತು ಗ್ರೀನ್ ಅಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಬಸವರಾಜ ಧನ್ನೂರ ಅವರು ಸಮಾರಂಭದಲ್ಲಿ ಕಸಪಾ ಅಧ್ಯಕ್ಷರಿಗೆ ಒಂದು ಲಕ್ಷ ರೂ.ಗಳ ಚೆಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ವಿಧಾನ ಪರಿಷತ್ ಸದಸ್ಯರಾದ ರಘುನಾಥ್‌ರಾವ್ ಮಲ್ಕಾಪೂರೆ, ಎಂಎಸ್‌ಐಎಲ್ ನಿರ್ದೇಶಕರಾದ ಬಾಬು ವಾಲಿ, ಹಿರಿಯ ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ, ಬಸವಕಲ್ಯಾಣ ಕಸಾಪದ ಕನ್ನಡ ಭವನ ನಿವೇಶನ ದಾಸೋಹಿ ಮಲ್ಲಿಕಾರ್ಜುನ ಕುರಕೋಟಿ, ಶಾಹೀನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್, ಡಾ.ಪೂರ್ಣಿಮಾ ಜಾರ್ಜ್, ಬಾಬುರಾವ್ ವಡ್ಡೆ, ಬಾಲಾಜಿ ಬಿರಾದಾರ, ಬಸವರಾಜ ಖಂಡೇರಾವ್, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಹಾಗೂ ಇತರರು ಇದ್ದರು.
ಗಮನ ಸೆಳೆದ ಬೈಕ್ ರ‍್ಯಾಲಿ: ಕನ್ನಡ ಭವನದ ಭೂಮಿಪೂಜೆ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೆಳಗ್ಗೆ ಸಿದ್ದಾರೂಢ ಮಠ ಗುಂಪಾದಿoದ ಚಿಕ್ಕಪೇಟ ರಸ್ತೆವರೆಗೆ ಬೈಕ್ ರ‍್ಯಾಲಿ ನಡೆಯಿತು. ಅಲಂಕೃತ ಸಾರೋಟದಲ್ಲಿ ಸಚಿವರಾದ ಪ್ರಭು ಚವ್ಹಾಣ್, ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಹಾಗೂ ಇತರರು ಕನ್ನಡ ಭವನ ಭೂಮಿಪೂಜೆಗೆ ಆಗಮಿಸಿದಾಗ ಚಪ್ಪಾಳೆ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ ಸ್ವಾಗತಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ಅವರು ವಂದಿಸಿದರು. ಕಲಾವಿದರಾದ ವೈಜನಾಥ ಸಜ್ಜನಶೆಟ್ಟಿ ಹಾಗೂ ತಂಡದವರು ಪ್ರಾರ್ಥಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

ಇನ್ನು ಅಮೆಜಾನ್‌ನಲ್ಲೂ ಕ್ಯಾಂಪ್ಕೋ ಕಾಳು ಮೆಣಸು, ಅಡಿಕೆ ಲಭ್ಯ

ಹೊಸದಿಗಂತ ವರದಿ, ಮಂಗಳೂರು: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕಾಳು ಮೆಣಸನ್ನು ಅಮೆಜಾನ್ ಮೂಲಕವೂ ಗ್ರಾಹಕರಿಗೆ ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,...

ಬಿಇಎಂಎಲ್ ಕಾರ್ಖಾನೆಯ ಖಾಸಗೀಕರಣ ಕೈಬಿಡಲು ಆಗ್ರಹಿಸಿ ಕಾರ್ಮಿಕರಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು ನಗರದಲ್ಲಿರುವ ಬಿಇಎಂಎಲ್ ಕಾರ್ಖಾನೆ ಖಾಸಗೀಕರಣ ಮಾಡುವುದನ್ನು ಕೈಬಿಡುವಂತೆ ಆಗ್ರಹಿಸಿ ಗುರುವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಗೇಟ್ ಬಳಿ ಜಮಾಯಿಸಿದ ಕಾರ್ಮಿಕರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಿಇಎಂಎಲ್ ಕಾರ್ಖಾನೆ...

ಅನ್ನದಾತರಿಂದ ‘ದೆಹಲಿ ಚಲೋ’: ಉದ್ರಿಕ್ತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ  ಪಂಜಾಬ್​ ಮತ್ತು ಹರ್ಯಾಣದ ರೈತರು "ದೆಹಲಿ ಚಲೋ" ನಡೆಸುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆಗಳನ್ನು ಹರಿಯಾಣ ಪ್ರವೇಶಿಸಲು ಬಿಡುವುದಿಲ್ಲ...

Don't Miss

ಹುಟ್ಟೂರಿನಲ್ಲಿಯೇ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ನಿನ್ನೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ ಗ್ರಾಮದಲ್ಲಿ...

ಇನ್ನು ಅಮೆಜಾನ್‌ನಲ್ಲೂ ಕ್ಯಾಂಪ್ಕೋ ಕಾಳು ಮೆಣಸು, ಅಡಿಕೆ ಲಭ್ಯ

ಹೊಸದಿಗಂತ ವರದಿ, ಮಂಗಳೂರು: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮತ್ತು ಕಾಳು ಮೆಣಸನ್ನು ಅಮೆಜಾನ್ ಮೂಲಕವೂ ಗ್ರಾಹಕರಿಗೆ ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,...

ಬಿಇಎಂಎಲ್ ಕಾರ್ಖಾನೆಯ ಖಾಸಗೀಕರಣ ಕೈಬಿಡಲು ಆಗ್ರಹಿಸಿ ಕಾರ್ಮಿಕರಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು ನಗರದಲ್ಲಿರುವ ಬಿಇಎಂಎಲ್ ಕಾರ್ಖಾನೆ ಖಾಸಗೀಕರಣ ಮಾಡುವುದನ್ನು ಕೈಬಿಡುವಂತೆ ಆಗ್ರಹಿಸಿ ಗುರುವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಗೇಟ್ ಬಳಿ ಜಮಾಯಿಸಿದ ಕಾರ್ಮಿಕರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಿಇಎಂಎಲ್ ಕಾರ್ಖಾನೆ...
error: Content is protected !!