ಬದಿಯಡ್ಕ: ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ತರಗತಿ ನಡೆಸುವ ಕೇರಳ ಸರಕಾರವು ಕನ್ನಡ ಭಾಷೆಯ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿದೆ. ಗಡಿನಾಡ ಕನ್ನಡಿಗರನ್ನು ನಿರಂತರ ದೂರತಳ್ಳುವ ಈ ಕಾರ್ಯ ಸಹಿಸಲು ಸಾಧ್ಯವಿಲ್ಲ. ಮಾಧ್ಯಮಗಳ ಮೂಲಕ ತರಗತಿಯನ್ನು ಪ್ರಾರೆಂಭಿಸಿದ ಕೇರಳ ಸರಕಾರವು ಕನ್ನಡ ತರಗತಿಯನ್ನು ಕೈಗೆತ್ತಿಕೊಳ್ಳದಿರುವುದು ಖಂಡನೀಯವಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಯುವ ಮೋರ್ಚಾ ಕಾಸರಗೋಡು ಮಂಡಲ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಬದಿಯಡ್ಕ ಸಹಾಯಕ ವಿದ್ಯಾಬ್ಯಾಸ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ
ಯುವ ಮೋರ್ಚಾ ಮಂಡಲಾದ್ಯಕ್ಷ ರಕ್ಷಿತ್ ಕೆದಿಲಾಯ, ಬದಿಯಡ್ಕ ಪಂಚಾಯತ್ ಅಧ್ಯಕ್ಷ ಹಿತೇಶ್ ಬದಿಯಡ್ಕ, ಶಿವಪ್ರಸಾದ್ ಬದಿಯಡ್ಕ, ಅಖಿಲೇಶ್ ಬದಿಯಡ್ಕ, ರಾಜೇಶ್ ರೈ ಬದಿಯಡ್ಕ ಉಪಸ್ಥಿತರಿದ್ದರು.