ದಿಗಂತ ವರದಿ, ಕಾಪು
ಕೇರಳ ಮೂಲದ ಬಡ ಕುಟುಂಬ ಹಿನ್ನೆಲೆಯುಳ್ಳ ದ್ವಿತೀಯ ಬಿ.ಇ. ವಿದ್ಯಾರ್ಥಿ ಸಂಜಯ್ ಶ್ರೀಕುಮಾರ್ ಕನ್ಯಾಕುಮಾರಿಯಿಂದ ಲಡಾಕ್ವರೆಗೆ ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧ್ಯೇಯೋದ್ದೇಶದಿಂದ ಆರಂಭಿಸಿದ ಸೈಕಲ್ ಯಾತ್ರೆ ಶನಿವಾರ ಕಾಪು ತಲುಪಿದೆ.
ಆತನ ತಂದೆ ಶ್ರೀಕುಮಾರ್ ಅವರ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್ ಭಾಗಕ್ಕೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್ ಅವರು ಈಗಾಗಲೇ 850 ಕಿಲೋಮೀಟರ್ ಕ್ರಮಿಸಿ ಭಾನುವಾರದ ಸಂಜೆಯ ಸುಮಾರಿನಲ್ಲಿ ಮೂಳೂರು ಭಾಗದಲ್ಲಿ ಸ್ಥಳೀಯರು ಮಾಹಿತಿ ತಿಳಿದು ಸಂಜಯ್ ಅವರನ್ನು ಸ್ವಾಗತಿಸಿದರು.
ಫೆಬ್ರವರಿಗೆ ಲಡಾಕ್ ಮುಟ್ಟುವ ಗುರಿ ಡಿಸೆಂಬರ್ನಲ್ಲಿ ಆರಂಭವಾದ ಈ ಯಾತ್ರೆ ಫೆಬ್ರವರಿಯ ಸುಮಾರಿಗೆ ಲಡಾಕ್ ಮುಟ್ಟುವ ಗುರಿಯನ್ನು ಇಟ್ಟುಕೊಂಡಿದ್ದು, ಸುಮಾರು ೩,೮೦೫ ಕಿಲೋಮೀಟರ್ ಉದ್ದದ ಈ ಪಯಣ ಇರಲಿದೆ.
ಸಂಜಯ್ ಅವರ ಸೈಕಲ್ ಪಯಣ ಸ್ವಾಗತಿಸುವಲ್ಲಿ ಆಸ್ಟಿನ್ ಬಂಗೇರ, ಇಬ್ರಾಹಿಂ, ಅಜೀಜ್ ಮೊದಲಾದವರು ಉಪಸ್ಥಿತರಿದ್ದರು. ರೈತರಿಗೆ ಬೆಂಬಲ, ಬಡತನ ರೇಖೆಗಿಂತ ಕೆಳಗೆ ಇರುವ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಸಾಧನೆ ಮಾಡುವ ಛಲ ಹಾಗೂ ಈ ದೇಶದ ಬೆನ್ನೆಲುಬಾಗಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಎಂಬ ಉದ್ದೇಶದಿಂದ ಕನ್ಯಾಕುಮಾರಿಯಿಂದ ಲಡಾಕ್ಗೆ ಸೈಕಲ್ ಪಯಣ ಮಾಡುತ್ತಿದ್ದು, ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಬೆಂಬಲ ಇದ್ದು, ಫೆಬ್ರವರಿ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಇರಿಸಿಕೊಳ್ಳಲಾಗಿದೆ ಎನ್ನುತ್ತಾರೆ ಸಂಜಯ್ ಶ್ರೀಕುಮಾರ್.