ಮೈಸೂರು: ಕೇರಳಾದ ವೈನಾಡು ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಪಿಲ ನದಿಯ ಪ್ರವಾಹ ಇಳಿಮುಖವಾಗಿದೆ.
ಮೈಸೂರು-ನಂಜನಗೂಡು ರಸ್ತೆ ಮಲ್ಲದಮೂಲೆ ಬಳಿ ರಸ್ತೆಯ ಮೇಲೆ ೩ ಅಡಿ ನೀರು ನಿಂತ ಕಾರಣ ಶನಿವಾರ ಬೆಳೆಗ್ಗಿನಿಂದ ರಸ್ತೆ ಬಂದ್ ಆಗಿತ್ತು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡು ಬದಲಿ ರಸ್ತೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ನದಿ ಪ್ರವಾಹ ಇಳಿಮುಖವಾದ ಕಾರಣ ಇಂದು ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ಕಪಿಲಾ ನದಿಯ ನೀರಿನ ಪ್ರಮಾಣ ೩೦ ಸಾವಿರ ಕ್ಯುಸೆಕ್ಸ್ ನೀರು ಹರಿಯುತ್ತಿದ್ದು, ನದಿಯ ಪ್ರವಾಹದಲ್ಲೂ ಕೂಡ ಇಳಿಮುಖವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರು ವಾಪಸ್ ಹರಿದು ಹೋಗಿದೆ. ಇದರಿಂದ ನಂಜನಗೂಡು ನಗರ ಸೇರಿದಂತೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ನದಿಪಾತ್ರ ಜನತೆ ನಿಟ್ಟಿಸಿರು ಬಿಡುವಂತಾಗಿದೆ.