Thursday, August 11, 2022

Latest Posts

ಕಪ್ಪುಪಟ್ಟಿಗೆ ಡ್ರಾಗನ್ ಕಂಪನಿ: 35 ಚೀನಾ ಕಂಪನಿ ಎತ್ತಂಗಡಿಗೆ ಡೋನಾಲ್ಡ್ ಟ್ರಂಪ್ ಹುಕುಂ!

ವಾಷಿಂಗ್‌ಟನ್: ಕೃತಕ ಬೇಹುಗಾರಿಕೆ ಮತ್ತು ಮಿಲಿಟರಿ ಪರಿಕರಗಳ ತಯಾರಿಕೆಗೆ ಸಂಬಂಧಿಸಿದಂತೆ ಕಾರ್ಯನಿರತವಾಗಿರುವ 35 ಚೀನಾ ಕಂಪನಿಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ.
ಕೋವಿಡ್ ವಿಚಾರದಲ್ಲಿ ಉಭಯ ದೇಶಗಳ ನಡುವೆ ಮಹಾಬಿಕ್ಕಟ್ಟು ತಲೆದೋರಿದ್ದು, ಅಮೆರಿಕದಲ್ಲಿರುವ ಎಲ್ಲ ಚೀನೀ ಕಂಪನಿಗಳನ್ನು ಮುಚ್ಚಲು ಡೋನಾಲ್ಡ್ ಟ್ರಂಪ್ ಶಪಥ ಮಾಡಿದ್ದಾರೆ.
ಕಪ್ಪುಪಟ್ಟಿಗೆ ಒಳಗಾದ ಬಹುತೇಕ ಚೀನೀ ಕಂಪನಿಗಳು ಕೃತಕ ಬೇಹುಗಾರಿಕೆ ಹಾಗೂ ಮಿಲಿಟರಿ ಪರಿಕರಗಳ ಸೂಕ್ಷ್ಮ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು . ಮೂರು ವಾರಗಳ ಹಿಂದೆ ಟೆಲಿಸಂಪರ್ಕ, ಆಟೋಮೊಬೈಲ್ ಕ್ಷೇತ್ರಕ್ಕೆ ಸೇರಿದ ಕೆಲ ಚೀನಿ ಕಂಪನಿಗಳನ್ನು ಮುಚ್ಚಲು ಶ್ವೇತಭವನದಿಂದ ತುರ್ತು ನೋಟಿಸ್ ಜಾರಿಗೊಂಡಿತ್ತು.
ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ದ್ವಿಪಕ್ಷೀಯ ಮಾತುಕತೆ ಹಾಗೂ ಒಪ್ಪಂದದಂತೆ ಅಮೆರಿಕದಲ್ಲಿ ನೂರಾರು ಚೀನಾ ದೇಶದ ಕಂಪನಿಗಳು ಕಾರ್ಯನಿರ್ವಹಿಸಿವೆ. ಅಲ್ಲದೆ ಲಕ್ಷಾಂತರ ಮಂದಿ ಚೀನೀ ವೈದ್ಯರು ಮತ್ತು ತಂತ್ರಜ್ಞರು ಇಲ್ಲಿ ನೆಲೆಸಿದ್ದಾರೆ. ಇಲ್ಲಿನ ಕೆಲ ವಿವಿಗಳಲ್ಲಿಯೂ ಚೀನೀ ದೇಶದ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೆ ಇಲ್ಲಿ ಚೀನಾ ದೇಶದ ವಿಜ್ಞಾನಿಯೊಬ್ಬರ ನಿಗೂಢ ಕೊಲೆಯಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss