Wednesday, August 17, 2022

Latest Posts

ಕಪ್ಪು ಚುಕ್ಕೆ ಬೀಳದಂತೆ ನೂತನ ಗ್ರಾ.ಪಂ. ಸದಸ್ಯರು ಕಾರ್ಯ ನಿರ್ವಹಿಸಿ: ಸಂಸದ ಬಿ.ವೈ.ರಾಘವೇಂದ್ರ

ಹೊಸದಿಗಂತ ವರದಿ,ಶಿವಮೊಗ್ಗ: 

ಸಂಘಟನೆಗೆ ಕಪ್ಪು ಚುಕ್ಕೆ ಬೀಳದಂತೆ ನೂತನ ಗ್ರಾಪಂ ಸದಸ್ಯರು ಕಾರ್ಯ ನಿರ್ವಹಿಸಿ ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.

ನಗರದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾರತ ಜಗತ್ತಿನ ಎತ್ತರದ ಸ್ಥಾನ  ಪಡೆಯುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಸಾಕಷ್ಟು ಶ್ರಮ ಅಗತ್ಯ. ಸೋಲು ಗೆಲುವು ಸಹಜ. ಸೋತವರನ್ನೂ ಗುರುತಿಸುವ ಕೆಲಸ ಪಕ್ಷ ಮಾಡತ್ತದೆ. ಕಳೆದ ಬಾರಿ ಕೇವಲ ಒಂದು ಸ್ಥಾನದಿಂದ ಬಿಜೆಪಿ ಶಿವಮೊಗ್ಗ ಜಿಪಂ ಕಳೆದುಕೊಳ್ಳಬೇಕಾಯಿತು. ಈ ಬಾರಿ ಹಾಗೆ ಅಗದಂತೆ ನೋಡಿಕೊಳ್ಳಬೇಕು ಎಂದರು.

ಒಂದು ಕಾಲದಲ್ಲಿ ಬಿಜೆಪಿ ನಗರಕ್ಕೆ ಹಾಗೂ ಶ್ರೀಮಂತರಿಗೆ ಸೀಮಿತ ಪಕ್ಷ ಎಂದು ಕರೆಯುತ್ತಿದ್ದರು. ಈ ಬಾರಿಯ ಗ್ರಾಪಂ ಫಲಿತಾಂಶ ಬಿಜೆಪಿ ದೇಶದ ಕಟ್ಟ ಕಡೆಯ ವ್ಯಕ್ತಿವರೆಗೂ ತಲುಪಿದೆ ಎಂದು ತೋರಿಸಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!