Thursday, August 11, 2022

Latest Posts

ಕಫದ ಸಮಸ್ಯೆಗೆ ಇಲ್ಲಿದೆ ಪರಿಹಾರ: ಸಿಂಪಲ್ ಮನೆಮದ್ದು

ಕೆಲವೊಬ್ಬರಿಗೆ ನೆಗಡಿಯಾಗಬೇಕು, ಜ್ವರ ಬರಬೇಕು, ಕೆಮ್ಮೇ ಇರಬೇಕು ಎಂಬುದಿಲ್ಲಿ. ಕಫ ಯಾವಾಗಲು ಗಂಟಲಲ್ಲಿಯೇ ಇರುತ್ತದೆ. ಕಫ ಸರಿಯಾಗಿ ಕರಿಗಿ ಹೋಗದಿದ್ದರೆ ಆಗಾಗ ಕೆಮ್ಮು ನೆಗಡಿ ಕಾಣಿಸಿಕೊಳ್ಳುತ್ತದೆ. ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆಯಾಗುತ್ತದೆ. ಹೀಗಾಗಿ ಕಫವನ್ನು ಸರಿಯಾಗಿ ಕರಗಿಸಿಕೊಳ್ಳಬೇಕು. ಅದಕ್ಕೆ ಔಷಧಿ ಮಾಡದೇ ಬಿಟ್ಟರೆ ಅದರಿಂದ ಮತ್ತೊಂದು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮಗೆ ಕಫದ ಸಮಸ್ಯೆ ಇದ್ದರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ.

  • ಶುಂಠಿಯನ್ನು ಚೆನ್ನಾಗಿ ಜಜ್ಜಿ ಅದನ್ನು ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಬೆಲ್ಲಹಾಕಿಕೊಂಡು ದಿನಕ್ಕೆ ಮೂರು ಸಲಿ ಕುಡಿದರೆ ಬೇಗ ಕಫ ಕರಗುತ್ತದೆ. ಇದನ್ನು ಒಂದು ವಾರ ಮಾಡದರೆ ಸಾಕು.
  • ಶುಂಠಿ ರಸವನ್ನು ತೆಗದು ಅದಕ್ಕೆ ಜೆನುತುಪ್ಪ ಸೇರಿಸಿಕೊಂಡು ಸೇವಿಸಬೇಕು. ಹೀಗೆ ಮಾಡಿದರೂ ಬೇಗ ಕಫ ಕರಗುತ್ತದೆ.
  • ಲಿಂಬು ರಸಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಮಿಶ್ರಣ ಮಾಡಿ ಅದನ್ನು ಕುದಿಸಬೇಕು. ಅದು ಚೆನ್ನಾಗಿ ಕುದ್ದ ಮೇಲೆ ಅಂಟು ಅಂಟು ಬರುತ್ತದೆ. ಅದನ್ನು ದಿನದಲ್ಲಿ ಆಗ ಆಗ ಸೇವಿಸಬೇಕು. ಕಫ ಕರಗುತ್ತದೆ.
  • ಈರುಳ್ಳಿಯನ್ನು ಕೆಂಡದಲ್ಲಿ ಕಪ್ಪಾಗುವಂತೆ ಸುಡಬೇಕು. ನಂತರ ಅದನ್ನು ಬೆಲ್ಲ ಹಚ್ಚಿಕೊಂಡು ಸೇವಿಸಬೇಕು. ಹೀಗೆ ಮಾಡಿದರೆ ಕೆಮ್ಮೂ, ನೆಗಡಿ ಕಡಿಮೆ ಆಗುತ್ತದೆ. ಮತ್ತು ಕಫ ಕರಗುತ್ತದೆ.
  • ಕಾಳು ಮೆಣಸಿನ ಪುಡಿಗೆ ಲಿಂಬು ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡ ಹಾಗೆಯೇ ನೆಕ್ಕಿದರೆ ಕಫ ಕಡಿಮೆ ಆಗುತ್ತದೆ.
  • ಕುತುಂಬರಿ ಕಾಳು ಮತ್ತು ಕಾಳು ಮೆಣಸನ್ನು ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಬೆಲ್ಲ ಹಾಕಬೇಕು. ಕಷಾಯ ತಣ್ಣಗಾದಮೇಲೆ ಸ್ವಲ್ಪ ಲಿಂಬು ಸೇರಿಸಿಕೊಂಡು ಕುಡಿದರೆ ಕಫ ಕಡಿಮೆ ಆಗುತ್ತದೆ.
  • ಬೆಂಡೆಕಾಯಿಯನ್ನು ಚೆನ್ನಾಗಿ ಕಟ್ ಮಾಡಿಕೊಂಡು ಅದಕ್ಕೆ ಕೆಂಪು ಕಲ್ಲು ಸಕ್ಕರೆ ಸೇರಿಸಿಕೊಂಡು ಕುದಿಸಿದರೆ ಬೆಂಡೆಕಾಯಿಯಲ್ಲಿನ ಲೋಳೆ ಅಂಶ ಬರುತ್ತದೆ. ಅದನ್ನು ದಿನದಲ್ಲಿ ೫ಕ್ಕೂ ಹೆಚ್ಚು ಹೊತ್ತು ಸೇವಿಸಿದರೆ ಬೇಗ ಕಫ ಕಡಿಮೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss