Saturday, July 2, 2022

Latest Posts

ಕಬ್ಬು ತುಂಬಿದ ಲಾರಿ ಪಲ್ಟಿ: ತಪ್ಪಿದ ಅನಾಹುತ

ಹೊಸದಿಗಂತ ವರದಿ, ಧಾರವಾಡ:

ಕಬ್ಬು ತುಂಬಿದ ಲಾರಿ ಪಲ್ಟಿಯಾದ ಘಟನೆ ಧಾರವಾಡ-ಸವದತ್ತಿ ರಸ್ತೆಯ ಅಮ್ಮಿನಭಾವಿ ಬಳಿ ಶನಿವಾರ ನಡೆದಿದೆ.
ಧಾರವಾಡದಿಂದ ಸವದತ್ತಿ ಕಡೆಗೆ ಕಬ್ಬು ಹೊತ್ತೊಯ್ಯುತ್ತಿದ್ದ ಲಾರಿಯ ಮುಂದಿನ ಗಾಲಿ ಟಾಯರ್ ಬ್ಲಾಸ್ಟ್ ಲಾರಿ ಪಲ್ಟಿಯಾಗಿದೆ.
ಹಿಂದೆ-ಮುoದೆ ಹಾಗೂ ಅಕ್ಕ-ಪಕ್ಕದಲ್ಲಿ ಯಾವುದೇ ವಾಹನ ನಿಲ್ಲದ್ದರಿಂದ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ.
ಅಲ್ಲದೇ, ಅದೃಷ್ಟಾವಶ ಕ್ಲೀನರ್ ಮತ್ತು ಚಾಲಕ ಪಾರಾಗಿದ್ದಾರೆ. ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದರು.
ಲಾರಿ ಪಲ್ಟಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಡಾಯಿತು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss