Sunday, August 14, 2022

Latest Posts

‘ಕಮ್ಯುನಿಸ್ಟರು ಮೊದಲು ಕೇರಳ ಸಿಎಂ ರಾಜೀನಾಮೆ ಕೇಳಲಿ’

ತಿರುವನಂತಪುರಂ: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯೊಬ್ಬಳ ಮೇಲೆ ನಡೆದಿದೆ ಎನ್ನಲಾದ ಹೇಯ ಅತ್ಯಾಚಾರ ಮತ್ತು ಆಕೆಯ ಅಂತ್ಯಕ್ರಿಯೆ ವಿವಾದ ಪ್ರಕರಣವನ್ನು ಮುಂದಿಟ್ಟುಕೊಂಡು ಸಿಪಿಎಂ ನಾಯಕರು ಯೋಗಿ ಆದಿತ್ಯನಾಥ್ ಸರಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಸಿಪಿಎಂ ನಾಯಕರ ಆಷಾಢಭೂತಿತನವನ್ನು ನೆಟ್ಟಿಗರು ತರಾಟೆಗೆತ್ತಿಕೊಂಡಿದ್ದಾರೆ. ಕಳೆದ ವಾರ ಕೇರಳದಲ್ಲಿ ಇಬ್ಬರು ಕೋವಿಡ್ -19ಪಾಸಿಟಿವ್ ಬಂದ ಹೆಣ್ಣುಮಕ್ಕಳ ಮೇಲೆ ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕಾಗಿ ಕೇರಳ ಮುಖ್ಯಮಂತ್ರಿಯ ರಾಜೀನಾಮೆ ಕೇಳಲು ಸಿಪಿಎಂ ಯಾಕೆ ಮುಂದಾಗುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕೇರಳದಲ್ಲಿ ಕೋವಿಡ್-೧೯ಪಾಸಿಟಿವ್ ಬಂದ ಹೆಣ್ಣುಮಕ್ಕಳಿಬ್ಬರ ಮೇಲೆ ಅತ್ಯಾಚಾರ ನಡೆಯಿತು. ಈ ಪ್ರಕರಣದಲ್ಲಿ ಡಿವೈಎಫ್‌ಐ(ಸಿಪಿಎಂನ ಯುವಘಟಕ) ಕಾರ್ಯಕರ್ತ ಮತ್ತು ಇನ್ನೋರ್ವ ಆರೋಗ್ಯ ಕಾರ್ಯಕರ್ತ ಆರೋಪಿಗಳಾಗಿದ್ದು, ಡಿವೈಎಫ್‌ಐ ಸದಸ್ಯನಿಗೆ ಜಾಮೀನು ಕೊಡಿಸಲು ಸಿಪಿಎಂ ನಾಯಕನೇ ಒಬ್ಬ ಪೊಲೀಸ್ ಠಾಣೆಗೆ ಹೋಗಿದ್ದನು. ಹೀಗಿರುವಾಗ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತಿತರ ಸಿಪಿಎಂ ನಾಯಕರು ಮೊದಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆ ಕೇಳಬೇಡವೇ?ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು , ರಾಜ್ಯದಲ್ಲಿ ತಾಯಂದಿರು, ಸಹೋದರಿಯರಿಗೆ ಪೂರ್ಣ ರಕ್ಷಣೆ ನೀಡಲಾಗುವುದು. ಅತ್ಯಾಚಾರಿಗಳಿಗೆ ಉತ್ತರ ಪ್ರದೇಶದಲ್ಲಿ ಉಳಿಗಾಲವಿಲ್ಲದಂತೆ ಮಾಡಲಾಗುವುದು. ಉ.ಪ್ರ.ದಲ್ಲಿ ಅತ್ಯಾಚಾರ ಪಾತಕಿಗಳಿಗೆ ನೀಡಲಾಗುವ ಶಿಕ್ಷೆ ಭವಿಷ್ಯದಲ್ಲಿ ಎಲ್ಲ ಕಡೆ ಮಾದರಿಯಾಗಿರುವಂತೆ ಮಾಡಲಾಗುವುದು ಎಂಬುದಾಗಿ ಘೋಷಿಸಿದ್ದಾರೆ. ಅಲ್ಲದೆ ಈಗಾಗಲೇ ಘಟನೆಗೆ ಕಾರಣವೆನ್ನಲಾದ ಎಸ್‌ಪಿ, ಡಿಎಸ್‌ಪಿ ಅವರನ್ನು ಅಮಾನತು ಮಾಡಿದ್ದು,ಪ್ರಕರಣದ ತ್ವರಿತ ವಿಚಾರಣೆ-ತನಿಖೆಗಾಗಿ ಕ್ಷಿಪ್ರ ನ್ಯಾಯಾಲಯ ಮತ್ತು ಸಿಟ್ ಸ್ಥಾಪಿಸಿದ್ದಾರೆ.ಸಂತ್ರಸ್ತರ ಕುಟುಂಬಕ್ಕೆ 25ಲ.ರೂ.ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ, ಮನೆ ನೀಡಲಾಗುವುದೆಂದು ಘೋಷಿಸಿ ಸಾಂತ್ವನ ಹೇಳಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss