ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕಾದಿದೆ. ಕೊರೋನಾದೊಂದಿಗೆ ದುಬೈನಿಂದ ಮೊದಲ ವಿಮಾನ ಮೇ 12ರಂದು ಬಂದಿಳಿದಿದ್ದರೆ ಎರಡನೇ ವಿಮಾನ ಮೇ 18ರಂದು ಬರಲು ಸಜ್ಜಾಗಿದೆ.
ಮೇ 12ರಂದು ಬಂದ 176 ಮಂದಿಯನ್ನು ದುಬೈನಿಂದ ಕರೆತರಲಾಗಿದೆ. ಆದರೆ ಬರುವಾಗ ಅವರ ಕೊರೋನಾ ರ್ಯಾಂಡಮ್ ಟೆಸ್ಟ್ ನಡೆಸಲಾಗಿದೆಯೇ ಎಂಬುದೇ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಜಿಲ್ಲಾಧಿಕಾರಿಯವರು ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಮತ್ತಷ್ಟು ಆತಂಕದ ವಿಚಾರವಾಗಿದೆ. ಆದ್ದರಿಂದ ಈಗಾಗಲೇ ಬಂದ 176 ಮಂದಿಯ ಮೇಲೂ ತೀವ್ರ ನಿಗಾ ಇರಿಸಬೇಕಿದೆ.
ಇನ್ನು ಮೇ 18ರಂದು ಇನ್ನಷ್ಟು ಮಂದಿ ಕನ್ನಡಿರು ದುಬೈಯಿಂದ ಆಗಮಿಸಲಿದ್ದಾರೆ. ಅವರು ಬಂದಾಗ ಮತ್ತಷ್ಟು ಮುಂಜಾಗೃತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕಾಗುತ್ತದೆ.
ಮೇ 18ರಂದು ಯಾವ ಜಿಲ್ಲೆಯವರು, ಎಷ್ಟು ಮಂದಿ ಪ್ರಯಾಣಿಕರು ಬರಲಿದ್ದಾರೆ ಎಂಬ ನಿಖರ ಮಾಹಿತಿ ದೊರಕಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ನಿಯಮಗಳಂತೆ ಅವರೆಲ್ಲರೂ ತಮ್ಮದೇ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ಗೊಳಪಡುವ ಷರತ್ತಿಗೆ ಒಪ್ಪಿಕೊಂಡೇ ಆಗಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.