Sunday, June 26, 2022

Latest Posts

ಕರಿಕಟ್ಟಿ ಗ್ರಾಮದಿಂದ ದೆಹಲಿವರೆಗೆ ಪಾದಯಾತ್ರೆ ಮೂಲಕ ಮುತ್ತಣ್ಣನ ಜಾಗೃತಿ ಅಭಿಯಾನ

ಧಾರವಾಡ: ಗದಗ ಜಿಲ್ಲೆಯ ರೋಣ ತಾಲೂಕಿನ ಕರಿಕಟ್ಟಿ ಗ್ರಾಮದ ನಿವಾಸಿ ಹಾಗೂ ಮಹಾತ್ಮ ಗಾಂಧೀಜಿ ಅಭಿಮಾನಿ ಮುತ್ತಣ್ಣ ತಿರ್ಲಾಪೂರ ಮಹದಾಯಿ ಅನುಷ್ಠಾನ, ನಿರುದ್ಯೋಗ ನಿವಾರಣೆ, ಗೋಹತ್ಯೆ ನಿಷೇಧ, ಸೇರಿ ಇತ್ಯಾದಿ ಜಾಗೃತಿಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಕರಿಕಟ್ಟಿ ಗ್ರಾಮದಿಂದ ದೆಹಲಿವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಗುರುವಾರ ಗಾಂಧಿ ವೇಷದಲ್ಲಿ ಪಾದಯಾತ್ರೆ ಮೂಲಕ ಧಾರವಾಡಕ್ಕೆ ಆಗಮಿಸಿದ ಮುತ್ತಣ್ಣ ಭ್ರೂಣ ಹತ್ಯೆ ನಿಷೇಧ, ಕೊರೋನಾ ನಿರ್ಮೂಲನೆ, ಮಧ್ಯಪಾನ ಮುಕ್ತ ಭಾರತ ನಿರ್ಮಾಣ, ಸರ್ಕಾರ ಆಸ್ತಿಗಳ ಮಾರಾಟ ವಿರೋಧ, ಬೈಕ್ ಸವಾರರು ಹೆಲ್ಮೇಟ್ ಕಡ್ಡಾಯ ಧರಿಸುವುದು ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶೇಷ.
ಬಯಲು ಶೌಚ್ಛ ಮುಕ್ತ ಭಾರತ ನಿರ್ಮಾಣದ ಕನಸ್ಸು ಹೊಂದಿರುವ ಮುತ್ತಣ, ಪರಿಸರ ಬೆಳೆಸುವ ಮೂಲಕ ಮಾಲಿನ್ಯ ತಡೆಗೆ ಮನವಿ ಮಾಡಿದರು. ಅಲ್ಲದೇ, ರಸ್ತೆ ಸುರಕ್ಷತೆ, ಇಂಧನಗಳ ಸಪ್ತಾಹದ ಬಗ್ಗೆ, ಕುಡಿದು ವಾಹನ ಚಲಾಯಿಸಿದಂತೆ ಕೊರೋನಾ, ಸರ್ವರಿಗೂ ಒಂದೇ ಕಾನೂನು ಇತ್ಯಾದಿಗಳ ಬಗ್ಗೆ ಅಭಿಯಾನದಿಂದ ಅರಿವು ಮೂಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss