Tuesday, June 28, 2022

Latest Posts

ಕರುನಾಡಿನಲ್ಲಿ ಯಾವ ಜಿಲ್ಲೆಗೆ ಯಾವ ಜೋನ್? ನಿಮ್ಮ ಜಿಲ್ಲೆ ಸೇಫಾ?

ಬೆಂಗಳೂರು: ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ರಾಜ್ಯವನ್ನು ಮೂರು ಬಣ್ಣಗಳಲ್ಲಿ ವಿಭಜಿಸಲಾಗಿದೆ. 15ಕ್ಕಿಂತ ಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆ ಇರುವುದೋ ಅಂತಹ ಪ್ರದೇಶಗಳಿಗೆ ರೆಡ್ ಜೋನ್ ಎನ್ನಲಾಗಿದೆ. ರಾಜ್ಯದಲ್ಲಿ ಈಗ 6 ಜಿಲ್ಲೆಗಳು ರೆಡ್ ಜೋನ್ ಎಂದು ಗುರುತಿಸಲಾಗಿದೆ.

6-14 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದರೆ, ಅಂತಹ ಜಿಲ್ಲೆಯನ್ನು ಆರೆಂಜ್ ಜೋನ್ ಎಂದು ಹೇಳಲಾಗುತ್ತದೆ. ಈವರೆಗೂ ರಾಜ್ಯದಲ್ಲಿ 5 ಜಿಲ್ಲೆಗಳನ್ನು ಆರೆಂಜ್ ಜೋನ್ ಎಂದು ಗುರುತಿಸಲಾಗಿದೆ.

1-5 ಕೊರೋನಾ ಪ್ರಕರಣಗಳಿದ್ದರೆ, ಅದನ್ನು ಯೆಲ್ಲೋ ಜೋನ್ ಎಂದು ಗುರುತಿಸಲಾಗುತ್ತದೆ. ಸದ್ಯ ರಾಜ್ಯದಲ್ಲಿ 5 ಜಿಲ್ಲೆಗಳು ಯೆಲ್ಲೋ ಜೋನ್ ಅಡಿಯಲ್ಲಿ ಬರಲಿದೆ.

ಈವರೆಗೂ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗದ ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದ್ದು, ಅದರಲ್ಲಿ 14 ಜಿಲ್ಲೆಗಳು ಆಯ್ಕೆಯಾಗಿದೆ.

ಯಾವ ರಾಜ್ಯಕ್ಕೆ ಯಾವ ಜೋನ್?

ಗ್ರೀನ್ ಜೋನ್ 0 ಕೇಸಸ್

  • ಕೋಲಾರ
  • ರಾಮನಗರ
  • ಚಾಮರಾಜನಗರ
  • ಹಾಸನ
  • ಚಿಕ್ಕಮಗಳೂರು
  • ಉಡುಪಿ
  • ಶಿವಮೊಗ್ಗ
  • ಕೊಡಗು
  • ದಾವಣಗೆರೆ
  • ಚಿತ್ರದುರ್ಗ
  • ಹಾವೇರಿ
  • ಕೊಪ್ಪಳ
  • ರಾಯಚೂರು
  • ಯಾದಗಿರಿ

ಯೆಲ್ಲೋ ಜೋನ್ 1-5

  • ಬೆಂಗಳೂರು ಗ್ರಾಮಾಂತರ
  • ಚಿಕ್ಕಬಳ್ಳಾಪುರ
  • ತುಮಕೂರು
  • ಗದಗ
  • ಉತ್ತರ ಕನ್ನಡ

ಆರೆಂಜ್ ಜೋನ್ 6-14

  • ಮಂಡ್ಯ
  • ದಕ್ಷಿಣ ಕನ್ನಡ
  • ಬಳ್ಳಾರಿ
  • ದಾರವಾಡ
  • ಬೀದರ್

ರೆಡ್ ಜೋನ್ 15ಕ್ಕೂ ಹೆಚ್ಚು ಪ್ರಕರಣ

  • ಬೆಂಗಳೂರು ನಗರ
  • ಮೈಸೂರು
  • ಬೆಳಗಾವಿ
  • ಬಾಗಲಕೋಟೆ
  • ವಿಜಯಪುರ
  • ಕಲಬುರಗಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss