spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಕರುಳುಬೇನೆ, ತಲೆಸುತ್ತುವುದು ಕೂಡಾ ಕೊರೋನಾ ಲಕ್ಷಣವಂತೆ!

ಮಂಗಳೂರು: ಜಡಿಮಳೆ, ಮಳೆಯೆಡೆಯಲ್ಲೇ ರಣಬಿಸಿಲಿನ ತಾಪದಿಂದ ಜನರ ಆರೋಗ್ಯ ಏರುಪೇರಾಗುವುದು ಸಹಜ. ಏರುಪೇರಾಗೋ ವಾತಾವರಣ, ಮುಖ್ಯವಾಗಿ ಮಳೆಗಾಲದಲ್ಲಿ ಡೆಂಗ್ಯು, ಮಲೇರಿಯಾ ಹರಡುವ ಸೊಳ್ಳೆಗಳ ಕಾರುಬಾರು ಕೂಡ ಜೋರಿರುತ್ತದೆ. ಕಳೆದ ವರ್ಷವರೆಗೂ ಡೆಂಗ್ಯು, ಮಲೇರಿಯ ಮಳೆಗಾಲದ ಖಾಯಂ ಅತಿಥಿಗಳು. ಈ ಬಾರಿ ಇವುಗಳ ಹಾವಳಿ ಇಲ್ಲವೆಂದಿಲ್ಲ . ಆದರೆ ಕೊರೋನಾ ಅಬ್ಬರದಲ್ಲಿ ಈ ಜ್ವರ ಪ್ರಕರಣಗಳು ಅಷ್ಟೊಂದು ಸುದ್ದಿಯಾಗುತ್ತಿಲ್ಲ ಅಷ್ಟೆ. ಆದರೆ ಈ ಜ್ವರಗಳ ಲಕ್ಷಣಗಳು ಮತ್ತು ಕೊರೋನಾ ಮಹಾಮಾರಿಯ ಲಕ್ಷಣಗಳು ಇದೀಗ ಬಹುತೇಕ ಸಮಾನವಾಗಿರೋದು ಆತಂಕಕಾರಿ.
ಮಳೆಗಾಲದಲ್ಲಿ ಜ್ವರ, ಶೀತ ಸಾಮಾನ್ಯವೆಂದು ಜನರು ಮನೆಮದ್ದಿಗೆ ಅಂಟಿಕೊಳ್ಳುವುದು ಸಹಜ ಅಥವಾ ಮೆಡಿಕಲ್ ಶಾಪ್‌ಗಳಿಂದ ಮಾತ್ರೆ ಖರೀದಿಸಿ ನುಂಗಿಬಿಡುತ್ತಾರೆ. ಆದರೆ ತಮ್ಮನ್ನು ಕಾಡ್ತಿರೋದೋ ಮಾಮೂಲಿ ಶೀತಜ್ವರವಲ್ಲ ಬದಲಾಗಿ ಮಹಾಮಾರಿ ಕೊರೋನಾ ಎಂಬ ಸತ್ಯ ಅರಿವಾಗುವ ವೇಳೆಗೆ ಆರೋಗ್ಯ ತೀರಾ ಹದಗೆಟ್ಟಿರುತ್ತದೆ. ಉಸಿರಾಟದ ಸಮಸ್ಯೆ ತೀವ್ರವಾಗಿರುತ್ತದೆ. ಇಂತಹ ಘಟ್ಟದಲ್ಲಿ ವೈದ್ಯರೂ ಅಸಹಾಯಕರಾಗಿ ಕೈಚೆಲ್ಲುವಂತಾಗುತ್ತದೆ. ಕೊರೋನಾ ಪ್ರಸಕ್ತ ಈ ತೆರ ಗೊಂದಲದ ಜತೆ ಅಪಾಯವನ್ನು ತಂದಿಟ್ಟಿದೆ.
ಇದುವರೆಗೂ ಜ್ವರ, ಗಂಟಲುಬೇನೆ, ಒಣ ಕಫ, ಮೂಗು ಕಟ್ಟುವುದು, ಉಸಿರಾಟದ ತೊಂದರೆ, ವಾಸನೆ-ರುಚಿ ಗೊತ್ತಾಗದಿರುವುದು ಕೊರೋನಾ ಲಕ್ಷಣಗಳಾಗಿತ್ತು. ಆದರೆ ಇದೀಗ ಕರುಳಿನ ತೊಂದರೆ, ಹೃದಯ ಮತ್ತು ನರಗಳಿಗೆ ಸಂಬಂತ ಸಮಸ್ಯೆಗಳಾದ ತಲೆಸುತ್ತುವುದು, ಮೂರ್ಛೆ ತಪ್ಪುವುದು, ಗೊಂದಲ ಇತ್ಯಾದಿ ಕೂಡ ಕೊರೋನಾ ರೋಗ ಲಕ್ಷಣ ಪಟ್ಟಿಗೆ ಸೇರಿವೆ ಎನ್ನುತ್ತಾರೆ ವೈದ್ಯರು. ಕರುಳಿನ ಸಮಸ್ಯೆಯಿರುವವರಿಗೆ ಉದರ ಬೇನೆ, ಭೇದಿ ಸಮಸ್ಯೆಗಳು ಸಾಮಾನ್ಯ.ಆದರೆ ಪ್ರಸಕ್ತ ಇವು ಕೂಡಾ ಕೊರೋನಾ ಲಕ್ಷಣ ಪಟ್ಟಿಯಲ್ಲಿರುವುದರಿಂದ , ಈ ತೆರ ಆರೋಗ್ಯ ಸಮಸ್ಯೆಯಿಂದ ಬಳಲುವವರು ಚಿಕಿತ್ಸೆ ಯಾವುದಕ್ಕೆ ಮಾಡೋದು ಎಂದು ಗೊಂದಲ ಪಡುವಂತಾಗಿದೆ ಜೊತೆಗೆ ತನಗೂ ಕೊರೋನಾವೇ ಎಂದು ಭಯ ಪಡುವಂತೆಯೂ ಆಗಿದೆ. ಹಾಗಾಗಿ ಇಂತಹ ಯಾವುದೇ ಆರೋಗ್ಯ ಸಮಸ್ಯೆ ಕಾಡಿದಾಗಲೂ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳುವುದೇ ಕ್ಷೇಮವೆಂದು ಸಲಹೆ ನೀಡುತ್ತದೆ ವೈದ್ಯವೃಂದ.
ಹೃದಯಾಘಾತ ಸಹಜ
ಶ್ವಾಸಕೋಶದ ಮೇಲೆ ಹಿಡಿತ ಸಾಸಿ ಉಸಿರನ್ನೇ ತಡೆ ಹಿಡಿವ ಕೊರೋನಾ ರಕ್ತ ಹೆಪ್ಪುಗಟ್ಟಿಸುವ ಕಾಯಿಲೆ. ಹಾಗಾಗಿ ಕೋವಿಡ್ ದೃಢೀಕೃತ ರೋಗಿಗಳಲ್ಲಿ ಹೃದಯಸ್ತಂಭನ ಸಾಮಾನ್ಯ. ವೈರಸ್‌ಗಳು ಹೃದಯದ ಕವಾಟಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಿದಾಗ ಹೃದಯಾಘಾತವಾಗುತ್ತದೆ. ಇದೇ ತೆರ ಇವು ಮಿದುಳಲ್ಲೂ ರಕ್ತವನ್ನು ಹೆಪ್ಪುಗಟ್ಟಿಸುತ್ತವೆ. ಇನ್ನು ಜನರು ಕೋವಿಡ್‌ಗೆ ಹೆದರುವುದರಿಂದಲೂ ಅಥವಾ ಭಯಯುಕ್ತ ಉದ್ವೇಗದಿಂದಲೂ ಹೃದಯ ಸ್ತಂಭನ ಸಂಭವಿಸುವುದು. ಉಸಿರಾಟಕ್ಕೆ ತೊಂದರೆಯೊಡ್ಡುವ ಬಹುತೇಕ ವೈರಸ್‌ಗಳ ಲಕ್ಷಣ ಸಮಾನವಾಗಿರುವ ಹಿನ್ನೆಲೆಯಲ್ಲಿ, ರೋಗಿಯನ್ನು ಕಾಡುತ್ತಿರೋದು ಮಾಮೂಲು ಶೀತ ಜ್ವರವೋ, ಎಚ್೧ಎನ್೧ ತೊಂದರೆಯಾ ಅಥವಾ ಕೋವಿಡ್-೧೯ ಕಾಟವೋ ಎಂದು ನಿಖರವಾಗಿ ಹೇಳಲು ಕಷ್ಟ. ಹಾಗಾಗಿ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಈ ಶಂಕೆ ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ತಜ್ಞ ವೈದ್ಯರು.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap