Monday, August 8, 2022

Latest Posts

ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಇನ್ನಿಲ್ಲ ಕ್ವಾರಂಟೈನ್, ಕೈಗಳ ಮೇಲೆ ಮುದ್ರೆ!

ಬೆಂಗಳೂರು: ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಬೇರೆ ರಾಜ್ಯಗಳ ಪ್ರಯಾಣಿಕರು ಕರ್ನಾಟಕಕ್ಕೆ ಬರಬೇಕಾದರೆ ಅನುಸರಿಸಬೇಕಾದ ಮಾರ್ಗಸೂಚಿಯ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಈ ಮೊದಲು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡುವವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಿತ್ತು. ಇದೀಗ ಸರ್ಕಾರ ಆ ನಿಯಮವನ್ನು ಬದಲಿಸಿದ್ದು, ಕ್ವಾರಂಟೈನ್​ ನಿಯಮ ತೆಗೆದುಹಾಕಿದೆ.ಸರಕು ಮತ್ತು ಯಾವುದೇ ಇತರೆ ವಾಹನಗಳ ಮೇಲೆ ನಿರ್ಬಂಧಗಳಿರುವುದಿಲ್ಲ. ಜತೆಗೆ ಈ-ಪಾಸ್​ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.

ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಸೂಚನೆ ಈ ರೀತಿಯಾಗಿವೆ:

ರಾಜ್ಯಕ್ಕೆ ಬರುವ ವ್ಯಕ್ತಿಗಳಲ್ಲಿ ಕೊರೊನಾ ಲಕ್ಷಣಗಳಿಲ್ಲದಿದ್ದರೆ 14 ದಿನಗಳ ಕ್ವಾರಂಟೈನ್​ ಅಗತ್ಯವಿಲ್ಲ ಎಂದು ತಿಳಿಸಿದ್ದು, ಇತರರಂತೆ ಅವರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು ಎಂದಿದೆ.

ಒಂದು ವೇಳೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಸ್ವಯಂ ನಿಗಾ ವಹಿಸುವುದು. ಜತೆಗೆ ಸಹಾಯವಾಣಿ 14410ಗೆ ಕರೆ ಮಾಡುವುದು ಕಡ್ಡಾಯವಾಗಿದೆ.

ಜತೆಗೆ ಯಾವುದೇ ಸಂಪರ್ಕಕ್ಕೆ ಬಾರದಂತೆ ನಿಗಾವಹಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ, ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಅಗತ್ಯವಾಗಿದೆ ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಹೇರಿದ್ದ ಎಲ್ಲಾ ನಿಯಮಗಳು ರದ್ದು:

  • ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು
  • ರಾಜ್ಯದ ಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ
  • ಕೈಗಳ ಮೇಲೆ ಮುದ್ರೆ ಹಾಕುವುದು
  • 14 ದಿನಗಳ ಕ್ವಾರಂಟೈನ್
  • ಮನೆಯ ಬಾಗಿಲಿಗೆ ಪೋಸ್ಟರ್ ಹಚ್ಚುವುದು
  • ಜಿಲ್ಲೆಯ ಸ್ವೀಕರಿಸುವ ಕೇಂದ್ರಗಳಲ್ಲಿ ತಪಾಸಣೆ
  • ಪ್ರಯಾಣೀಕರ ವರ್ಗೀಕರಣ
  • ಬೇರ್ಪಡಿಸುವಿಕೆ ಹಾಗೂ ಪರೀಕ್ಷಿಸುವಿಕೆ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss