ಮಡಿಕೇರಿ: ಮುಂಗಾರು ಮಳೆಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಪ್ರವೇಶಿಸಿದ್ದು, ಇದನ್ನು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ.
ಅದರಂತೆ ಕೊಡಗು ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆಯಲ್ಲಿ ಅತಿ ಹೆಚ್ಚು ಅಂದರೆ 82.20 ಮಿ.ಮೀ.ಮಳೆಯಾಗಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 43.65 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 30.80 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 11.37 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 28.61 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 18, ನಾಪೋಕ್ಲು 34.80, ಸಂಪಾಜೆ 58, ಭಾಗಮಂಡಲ 63.80, ವೀರಾಜಪೇಟೆ ಕಸಬಾ 82.20, ಹುದಿಕೇರಿ 8, ಶ್ರೀಮಂಗಲ 9.40, ಪೊನ್ನಂಪೇಟೆ 25.20, ಅಮ್ಮತ್ತಿ 43, ಬಾಳೆಲೆ 17 ಮಿ.ಮೀ., ಸೋಮವಾರಪೇಟೆ ಕಸಬಾ 19.40, ಶನಿವಾರಸಂತೆ 9.40, ಶಾಂತಳ್ಳಿ 22, ಕೊಡ್ಲೀಪೇಟೆ 10.40, ಕುಶಾಲನಗರ 3, ಸುಂಟಿಕೊಪ್ಪ 4 ಮಿ.ಮೀ.ಮಳೆಯಾಗಿದೆ.