Monday, August 8, 2022

Latest Posts

ಕರ್ನಾಟಕ‌ ಬಂದ್ ಹಿನ್ನೆಲೆ ನಡೆದ ಪ್ರತಿಭಟನೆ ವೇಳೆ ಡ್ಯಾನ್ಸ್ ಮಾಡಿದ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್!

ಬಳ್ಳಾರಿ: ಭೂ‌ ಮಸೂದೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಕ್ರಮ ಖಂಡಿಸಿ ಕರೆ ನೀಡಿದ ರಾಜ್ಯ ಬಂದ್ ಹಿನ್ನೆಲೆ ಬಳ್ಳಾರಿಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಆಗಿದ್ದು, ನಾನಾ ಚರ್ಚೆಗೆ ಗ್ರಾಸವಾಗಿದೆ.
ರೈತರಿಗೆ ಅನ್ಯಾಯವಾಗಿದೆ, ಈ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ ಎಂದು ಆರೋಪಿಸಿ, ರೈತಪರ ಸಂಘಟನೆಗಳು ಕರೆ‌ ನೀಡಿದ‌ ಬಂದ್ ಗೆ ನಮ್ಮ‌ ಬೆಂಬಲವೂ ಇದೆ ಎಂದು ಕಾಂಗ್ರೆಸ್ ಪ್ರಕಟಿಸಿತ್ತು. ಆದರೇ, ಬಂದ್ ಹಿನ್ನೆಲೆಯಲ್ಲಿ ನಗರದ ರಾಯಲ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್ ಡೊಳ್ಳಿನೊಂದಿಗೆ‌ ಹೆಜ್ಜೆ ಹಾಕುವ ಮೂಲಕ ಕುಣಿದು, ಸಂಭ್ರಮಿಸಿದರು. ಈ ವೇಳೆ ಸ್ಥಳದಲ್ಲಿದ್ದ ರೈತ ಮುಖಂಡರು ಹಾಗೂ ಇತರೇ ಸಂಘಟನೆ ಪದಾಧಿಕಾರಿಗಳ ಆಕ್ರೋಶಕ್ಕೆ‌ ಕಾರಣವಾಗಿದೆ. ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಾನಾ ಚೆರ್ಚೆಗೆ ಗ್ರಾಸವಾಗಿದೆ. ರೈತರ ಬಗ್ಗೆ‌ ಕಾಳಜಿ‌ ಇದ್ದರೇ ಪ್ರತಿಭಟನೆಯಲ್ಲಿ‌‌ ಭಾಗವಹಿಸಿ ರೈತರ ಪರವಾಗಿ‌‌ ಧ್ವನಿ ಎತ್ತುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಅದನ್ನು ಬಿಟ್ಟು ರೈತರ‌ ಪ್ರತಿಭಟನೆಯಲ್ಲಿ ಭಾಗವಹಿಸಿ ನೃತ್ಯ‌ ಮಾಡಿರುವುದು‌ ಚರ್ಚೆಗೆ‌ ಗ್ರಾಸವಾಗಿದೆ.
ವೃತ್ಯದಲ್ಲಿ ಜಮಾಯಿಸಿದ್ದ ರೈತ ಮುಖಂಡರು ನೂತನ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಈ ವೇಳೆ ರೈತರ ಬೆಂಬಲಕ್ಕೆ ನಿಲ್ಲುವೆ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಕುಣಿದು ಕುಪ್ಪಳಿಸಿರುವುದು ನಾನಾ ಚೆರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss