Tuesday, July 5, 2022

Latest Posts

ಕರ್ನಾಟಕ ಕಾಲೇಜಿನಲ್ಲಿ ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್: ಮುಂಜಾಗ್ರತಾ ಕ್ರಮಕ್ಕಾಗಿ ಕೋವಿಡ್ ಪರೀಕ್ಷೆ: ಡಾ.ಜಗನ್ನಾಥ ಹೆಬ್ಬಾಳೆ

ಬೀದರ: ಪ್ರತಿಷ್ಠಿತ ಎ ಗ್ರೇಡ್ ಪದವಿಯ ಬೀದರಿನ ಕರ್ನಾಟಕ ಮಹಾವಿದ್ಯಾಲಯದ ಎಲ್ಲಾ 122 ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಆರೋಗ್ಯದ ಮುಂಜಾಗ್ರತಾ ಕ್ರಮವಾಗಿ ಎಲ್ಲರಿಗೂ ಸುಮಾರು ಎರಡು ದಿವಸಗಳಿಂದ ತಪಾಸಣೆ ನಡೆಸಲಾಗಿದೆ.

ಅಲ್ಲದೆ ಬೀದರಿನ ಎಲ್ಲಾ ಕಾಲೇಜಿನ ಸಿಬ್ಬಂದಿಗಳು ಕೂಡಾ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಜಿಲ್ಲೆಯಿಂದ ಈ ಕೊರೊನಾ ವೈರಸ್ ಹೊಡೆದೋಡಿಸಲು ಸಹಕರಿಸಬೇಕೆಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಜಗನ್ನಾಥ ಹೆಬ್ಬಾಳೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ರವಿಕುಮಾರ, ಪಂಕಜಾ, ನಿತೇಶ್, ಆನಂದ ಅವರು ಕಾಲೇಜಿನ ಸಿಬ್ಬಂದಿಗಳ ತಪಾಸಣೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಅನಿಲಕುಮಾರ ಚಿಕ್ಕಮಾಣೂರ, ಡಾ.ಉಮಾಕಾಂತ ಪಾಟೀಲ, ಮಾದಯ್ಯ ಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss