ಹಾವೇರಿ:ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬುಧವಾರ ಜರುಗಿದ ಮತದಾನ ಸಂಪೂರ್ಣವಾಗಿ ಶಾಂತಿಯುತವಾಗಿ ಶೇ. ೬೭.೮೯ರಷ್ಟು ಮತದಾನ ಜರುಗಿತು.
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಕಾರವಾರ ಜಿಲ್ಲೆಗಳನ್ನೊಳಗೊಂಡು ಒಟ್ಟು ೭೪೨೭೮ ಮತದಾರರಲ್ಲಿ ಹಾವೇರಿ ಜಿಲ್ಲೆಯಲ್ಲಿ ೨೩೬೦೩ ಮತದಾನಕ್ಕಾಗಿ ನೋಂದಾಯಿಸಿಕೊಂಡಿದ್ದರು ಇವರಲ್ಲಿ ೧೬೦೨೩ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿದ್ದರೆ ಇನ್ನು ೭೫೭೦ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೩೭ ಮತಗಟ್ಟೆಗಳಲ್ಲಿ ಮತದಾನ ಜರುಗಿದ್ದು ಇವುಗಳಲ್ಲಿ ಸವಣೂರ ತಾಲೂಕಿನಲ್ಲಿ ಶೇಖಡಾವಾರು ಹೆಚ್ಚು ಮತದಾನವಾಗಿದ್ದು ನಂತರ ಸ್ಥಾನದಲ್ಲಿ ಬ್ಯಾಡಗಿ ತಾಲೂಕಿನಲ್ಲಿ ಹೆಚ್ಚು ಮತದಾನವಾಗಿದ್ದರೆ ಮೂರನೆ ಸ್ಥಾನದಲ್ಲಿ ಹಾವೇರಿ ತಾಲೂಕ ಇದೆ.