ಹೊಸ ದಿಗಂತ ವರದಿ, ಮಂಗಳೂರು:
ಕನ್ನಡಪರ ಸಂಘಟನೆಗಳು ಡಿ.5ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಬಂದ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ದೊರೆಯುವ ಸಾಧ್ಯತೆ ಇಲ್ಲ.
ಜಿಲ್ಲೆಯಲ್ಲಿ ಬಂದ್ ನಡೆಯುವ ಬಗ್ಗೆ ಶುಕ್ರವಾರ ರಾತ್ರಿವರೆಗೆ ಯಾವುದೇ ಸಂಘಟನೆಗಳು ಅಧಿಕೃತ ಮಾಹಿತಿ, ಕರೆ ನೀಡಿಲ್ಲ. ಬದಲಾಗಿ ಕನ್ನಡಪರ ಸಂಘಟನೆಗಳ ಬಂದ್ಗೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಲಾಗಿತ್ತು. ಕನ್ನಡಪರ ಸಂಘಟನೆಗಳ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ದೊರೆಯುವ ಸಂಭವ ಕ್ಷೀಣವಾಗಿದೆ. ಬಂದ್ಗೆ ಬೆಂಬಲ ವ್ಯಕ್ತವಾಗದ ಹಿನ್ನೆಲೆಯಲ್ಲಿ ಶನಿವಾರ ಬಸ್ ಸಹಿತ ವಾಹನ ಸಂಚಾರ, ವ್ಯಾಪಾರ, ವ್ಯವಹಾರ ಎಂದಿನಂತೆಯೇ ಇರಲಿದೆ.
ಬಂದ್ಗೆ ರಾಜ್ಯ ಸರಕಾರಿ ನೌಕರರ ಬೆಂಬಲ ಇಲ್ಲ ಎಂದು ಸಂಘದ ಅಧ್ಯಕ್ಷ ಷಡಕ್ಷರಿ ಗುರುವಾರ ಹೇಳಿಕೆ ನೀಡಿದ್ದರು.
ಬಂದ್ಗೆ ನಮ್ಮ ಬೆಂಬಲ ಇಲ್ಲ ಎಂದು ದ.ಕ. ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದ್ದಾರೆ.