Monday, August 15, 2022

Latest Posts

ಕರ್ನಾಟಕ ರಾಜ್ಯ ಆದಿಜಾಂಬವ ಸಂಘದಿಂದ ಬೃಹತ್ ರ್ಯಾಲಿ

ಹೊಸ ದಿಗಂತ ವರದಿ ಧಾರವಾಡ:

ನ್ಯಾಯಮೂರ್ತಿ ಡಾ. ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದಿಂದ ಬುಧವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.

ನಗರದ ಕಲಾಭವನದಿಂದ ಜಗ್ಗಲಿಗೆ ಮೇಳದೊಂದಿಗೆ ರ‌್ಯಾಲಿ ಕೈಗೊಂಡ ನೂರಾರು ಆದಿಜಾಂಬವರು, ಅಂಬೇಡ್ಕರ್ ವೃತ್ತ, ಅಂಜುಮನ್ ವೃತ್ತ, ಜ್ಯುಬ್ಲಿ ವೃತ್ತ, ಕೋರ್ಟ್ ವೃತ್ತ, ಹೆಡ್-ಪೋಸ್ಟ್ ವೃತ್ತ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಸಮಾವೇಶವಾಗಿ ಪರಿವರ್ತನೆಗೊಂಡ ನೂರಾರು ಕೆಲಕಾಲ ಪ್ರತಿಭಟಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ, ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಆದಿಜಾಂಬವ ಸಮಾಜದವರಿಗೆ ಸ್ವತಂತ್ರದ ಬಳಿಕೂ ನಿಜ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಡಾ. ಸದಾಶಿವ ಆಯೋಗ ಮಾದಿಗ ಒಳಗೊಂಡ ಉಪಪಂಗಡಕ್ಕೆ ಶೇ. 6, ಚಲವಾದಿ ಒಳಗೊಂಡ ಉಪಪಂಗಡಗಳಿಗೆ ಶೇ.3, ಇತರೆ ಜಾತಿಗೆ ಶೇ.1 ಹೀಗೆ ಮೀಸಲಾತಿ ಹಂಚಿಕೆ ಮಾಡಬೇಕು. ವರದಿ ರಾಜ್ಯ ಸರ್ಕಾರ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದರು.

ರ‌್ಯಾಲಿಯಲ್ಲಿ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮಾದರ, ಉಪಾಧ್ಯಕ್ಷ ಮಧುಕೇಶ್ವರ ಮಾದರ, ಡಾ. ವಿಜಯ ಗುಂಟ್ರಾಳ, ಮೋಹನ ಹಿರೇಮನಿ, ಚಂದ್ರ ಮಾದರ ಸೇರಿದಂತೆ ನೂರಾರು ಜನರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss