ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕರ್ನಾಟಕ ರಾಜ್ಯ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ರಾಜ್ಯಾಧ್ಯಕ್ಷರಾಗಿ ಡಿ.ಕೃಷ್ಣಕುಮಾರ್ ಅವಿರೋಧ ಆಯ್ಕೆ

ಹೊಸ ದಿಗಂತ ವರದಿ, ತುಮಕೂರು:

ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ರಾಜ್ಯಾಧ್ಯಕ್ಷರಾಗಿಕುಣಿಗಲ್ ಬಿ ಜೆಪಿ ನಾಯಕ ಡಿ.ಕೃಷ್ಣಕುಮಾರ್ ಅವರು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.ಕೃಷ್ಣಕುಮಾರ್ ಅವರನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ಅಭಿನಂದಿಸಿದ್ದಾರೆ.
20 ಸದಸ್ಯರುಳ್ಳ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅತಿ ಹೆಚ್ಚು ನೆರವು ನೀಡುವಂತ ಪಿಎಲ್ ಡಿ ಬ್ಯಾಂಕ್ ಎಂದೇ ಪ್ರಸಿದ್ಧಿ ಪಡೆದಿರುವ ಬ್ಯಾಂಕ್ ಇದಾಗಿದೆ.
ಭಾರತೀಯ ಜನತಾ ಪಕ್ಷವು ತುಮಕೂರು ಜಿಲ್ಲೆಗೆ ಅತಿ ಹೆಚ್ಚು ನಿಗಮ-ಮಂಡಳಿ ಸ್ಥಾನಗಳನ್ನು ನೀಡಿದೆ.
ಈಗ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ರಾಜ್ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರಿಗೆ ಹಾಗೂ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಮತ್ತು ನಮ್ಮ ಸರ್ಕಾರಕ್ಕೆ ತುಮಕೂರು ಜಿಲ್ಲೆಯ ಜನತೆ ಆಭಾರಿಯಾಗಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss