Wednesday, June 29, 2022

Latest Posts

ಕರ್ನಾಟಕ ವಿವಿಯಲ್ಲಿ ಕನ್ನಡ ಕಲಿಕೆಗೆ ಕಂಟಕ: ಕರ್ನಾಟಕ ವಿದ್ಯಾವರ್ಧಕ ಸಂಘ ಆಕ್ರೋಶ

ಧಾರವಾಡ: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಜಾರಿಗೆ ತಂದ ಪರಿಣಾಮ ಕನ್ನಡ ಭಾಷಾ ಕಲಿಕೆಗೆ ಕಂಟಕ ಬಂದೊದಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ ಕಳವಳ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿವಿ ಇದೀಗ ಸಿಬಿಎಸ್‌ಸಿ ಪಠ್ಯಕ್ರಮ ಸಿದ್ಧತೆಯಲ್ಲಿ ತಲ್ಲೀನವಾಗಿದೆ. ಇದರಲ್ಲಿ ಕನ್ನಡ ವಿಷಯ ಬೋಧನೆ ಈ ಮೊದಲು ಜಾರಿಯಲ್ಲಿದ್ದ ಮಾದರಿ ಬದಲಿಸಿದ ಕವಿವಿಯು ವಿಸ್ತೃತ ಬೋಧನೆ ಬದಲಿಗೆ ಕಡಿಮೆ ಬೋಧನಾ ಜಾರಿಗೆ ತರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪದವಿ ಹಂತದಲ್ಲಿ ಈ ಹಿಂದಿದ್ದ 5-6ನೇ ಸೆಮಿಸ್ಟರ್‌ಗಳಿಗೂ ಕನ್ನಡ ಕಲಿಕೆ ಕಡ್ಡಾಯ ಕಡಿಮೆ ಮಾಡಿ ಮೊದಲಿನ 1ರಿಂದ 4 ಸೆಮಿಸ್ಟರ್‌ಗೆ ಬೋಧಿಸಲು ಪರಿಗಣಿಸಿದೆ. ಅಲ್ಲದೇ, ಆಂಗ್ಲ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕೆಂಬ ನಿಯಮ ಹೇರಿದೆ ಎಂದು ಗಂಭೀರ ಆರೋಪ ಮಾಡಿದರು.
ವಿವಿಯ ಈ ನಿರ್ಧಾರ ಕನ್ನಡ ಪ್ರಾಧ್ಯಾಪಕರ ಬೋಧನೆ, ಕರ‍್ಯಬಾರ ಕಡಿಮೆ ಮಾಡಿದ್ದ ಕನ್ನಡಕ್ಕೆ ಮತ್ತು ಕನ್ನಡ ಕಲಿಕೆಗೆ ಕುತ್ತು ತರುವ ವಿಷಯ. ಶುಕ್ರವಾರ ಅಕಾಡೆಮಿಕ ಕೌನ್ಸಿಲ್ ಸಭೆ ನಡೆಯಲಿದ್ದು, ಸಭೆಯಲ್ಲಿ ಪಠ್ಯವಿಷಯ ಬೋಧನಾ ಕರ‍್ಯಬಾರ ಇತ್ಯಾದಿ ಅಂತಿಮಗೊಳ್ಳುವ ಆತಂಕ ವ್ಯಕ್ತಪಡಿಸಿದರು.
ಕೇಂದ್ರ-ರಾಜ್ಯ ಸರ್ಕಾರಗಳು ಸಿಬಿಸಿಎಸ್ ಪಠ್ಯಕ್ರಮ ಮಾರ್ಪಡಿಸಿ, ಈ ಮೊದಲು ಕನ್ನಡ ವಿಷಯ ಕಲಿಯಲು ಮತ್ತು ಬೋಧನಾ ಪದ್ಧತಿ ಮುಂದುವರೆಸಬೇಕು. ಇದು ಕವಿವಿಯಲ್ಲೂ ಮುಂದುವರಿಯಬೇಕು. ಕನ್ನಡ ಪ್ರಾಧ್ಯಾಪಕರ ಬೋಧನಾ ಕರ‍್ಯಬಾರ ಕಡಿಮೆ ಮಾಡದೆ ಯಥಾಪ್ರಕಾರ ಮುಂದುವರೆಸಲು ಆಗ್ರಹಿಸಿದರು.
ಕವಿವಿಯು 5-6ನೇ ಸೆಮಿಸ್ಟರ್‌ಗೆ ಕನ್ನಡ ಕಲಿಸುವ ಕೈಬಿಡುವ ನಿರ್ಧಾರ ಹಿಂಪಡೆದು, ಪದವಿ ವರ್ಗಗಳಿಗೆ ಈ ಹಿಂದಿನ ಕನ್ನಡ ಕಲಿಸುತ್ತಿದ್ದ ಮಾದರಿಯೇ ಮುಂದುವರೆಸುವ ಹಾಗೂ ಆಂಗ್ಲಭಾಷೆ ಕಡ್ಡಾಯ ಕಲಿಯಲೇಬೇಕೆಂಬ ಒತ್ತಾಯ ಹಿಂಪಡೆಯುವoತೆ ಒತ್ತಾಯಿಸಿದರು.
ಈ ಬೇಡಿಕೆಗಳನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಕೂಡಲೇ ಈಡೇರಿಸದಿದ್ದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳು ಉಗ್ರವಾದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss