ಕರ್ಫ್ಯೂ ಜವಾಬ್ದಾರಿ ಮರೆತು ಕ್ರಿಕೆಟ್ ಆಡಿದ ಜಾಣರು

0
75

ಬೆಂಗಳೂರು: ಒಂದೆಡೆ ದೇಶಾದ್ಯಂತ ಜನತಾ ಕರ್ಫ್ಯೂಗೆ ನಾಗರಿಕರು ಜವಾಬ್ದಾರಿಯಿಂದ ಬೆಂಬಲ ನೀಡಿದರೆ, ಕೆಲವರು ಬೀದಿಗೆ ಬಂದು ಕ್ರಿಕೆಟ್ ಆಡುವುದು, ಬೈಕ್ ವ್ಹೀಲಿಂಗ್ ಮಾಡುವ ಮೂಲಕ ಜವಾಬ್ದಾರಿ ಮರೆತವರಂತೆ ವರ್ತಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್‌ನಿಂದ ಜನರನ್ನು ರಕ್ಷಿಸುವ ಸಲುವಾಗಿ ದೇಶಾದ್ಯಂತ ಒಂದು ದಿನದ ಮಟ್ಟಿಗೆ ಭಾನುವಾರ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರೆ. ಅದಕ್ಕೆ ರಾಜ್ಯವಲ್ಲದೇ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಆದರೆ, ಇಂತಹ ಮಾರಕ ರೋಗದ ಬಗ್ಗೆ ನಿರ್ಲಕ್ಷ್ಯವಹಿಸಿದ್ದಲ್ಲದೇ ಅಸಡ್ಡೆತನ ಮಾಡಿದ್ದರಿಂದ ಸುತ್ತಮುತ್ತಲಿನ ನಾಗರಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆಗಳು ನಡೆದವು.

ಇಂತವರನ್ನು ಪತ್ತೆ ಹಚ್ಚುವ ಸಲುವಾಗಿ ಬೆಂಗಳೂರು ಪೊಲೀಸರು ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತ ಸದಾ ಜಾಗೃತಿ ಮೂಡಿಸುತ್ತಿದ್ದರು. ಇನ್ನು ಕೆಲವರು ಕಚೇರಿಗಳಿಗೆ ರಜೆ ನೀಡದ ಕಾರಣ ಅನಿವಾರ್ಯವಾಗಿ ಕೆಲಸಕ್ಕೆ ಹಾಜರಾಗಬೇಕಿತ್ತು. ಅದಕ್ಕೆ ಅಲ್ಲೊಂದು ಇಲ್ಲೊಂದು ರಸ್ತೆಗಳಲ್ಲಿ ದ್ವಿಚಕ್ರವಾಹನಗಳ ಓಡಾಟ ಕಂಡುಬಂತು.

ಇನ್ನು ಕೆಲ ಪುಂಡ ಯುವಕರು ಕಾಲೋನಿಯ ಒಳಗಡೆ ಒಂದೆ ಬೈಕ್‌ಗಳಲ್ಲಿ ಮೂರ್‍ನಾಲ್ಕು ಜನ ಓಡಾಡುತ್ತಿದ್ದರು. ಅಲ್ಲದೇ ನಗರದ ರಸ್ತೆಗಳು ಖಾಲಿ ಇದ್ದ ಕಾರಣ ಮನಬಂದತೆ ದ್ವಿಚಕ್ರವಾಹನಗಳನ್ನು ವೇಗವಾಗಿ ಓಡಿಸಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಸಾಲದ್ದಕ್ಕೆ ಬೆಂಗಳೂರಿನ ರಸ್ತೆಗಳು ಖಾಲಿ ಇದ್ದವು ಎಂಬ ಕಾರಣಕ್ಕಾಗಿಯೇ ಅತಿವೇಗದ ಡ್ರೈವ್‌ನಿಂದ ಹಲವು ಅಪಘಾತಗಳೂ ಸಂಭವಿಸಿದ್ದು, 19 ವರ್ಷದ ಓರ್ವ ಯುವಕ ಕೂಡ ಸಾವಿಗೀಡಾದ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here