Monday, August 8, 2022

Latest Posts

ಕರ್ಫ್ಯೂ ವೇಳೆ ಮಾಸ್ಕ್ ಧರಿಸದೆ ಪೊಲೀಸರೊಂದಿಗೆ ಕಿರಿಕ್ ಮಾಡಿದ ಸೈಕ್ಲಿಸ್ಟ್ ಗೆ ಕ್ಲಾಸ್ ತೆಗೆದುಕೊಂಡ ಜನರು

ಮೈಸೂರು: ಕರ್ಫ್ಯೂ ವೇಳೆ ಮಾಸ್ಕ್ ಧರಿಸದೆ, ಅನಗತ್ಯವಾಗಿ ಸಂಚರಿಸದಲ್ಲದೆ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಕಿರಿಕ್ ಮಾಡಿದ ಸೈಕ್ಲಿಸ್ಟ್ರೊಬ್ಬರಿಗೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡ ಘಟನೆ ಕೂಡ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆಯಿತು.
ಆರ್ಯುವೇದಿಕೆ ವೃತ್ತದಲ್ಲಿ ಸೈಕಲ್ ತುಳಿದುಕೊಂಡು ಬಂದ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಸ್ಥಳದಲ್ಲಿದ್ದ ಪೊಲೀಸರು ಪ್ರಶ್ನಿಸಿದಾಗ, ಆತ ನೀಡಿದ ಕಾರಣವನ್ನು ಒಪ್ಪದ ಪೊಲೀಸರು ಕರ್ಫ್ಯೂ ಇದ್ದರೆ ಸೈಕ್ಲಿಂಗ್ ಮಾಡಿಕೊಂಡು ಬಂದಿರುವುದಲ್ಲದೆ, ಮಾಸ್ಕ್ ಧರಿಸದಿರುವುದು ತಪ್ಪು, ಕೂಡಲೇ ಮಾಸ್ಕ್ ಧರಿಸಿ ಎಂದು ಬುದ್ಧಿ ಹೇಳಿದರೂ, ಕೇಳದ ಆತ ನಾನು ಡಾಕ್ಟರ್, ವ್ಯಾಯಾಮ ಮಾಡುವಾಗ ಮಾಸ್ಕ್ ಹಾಕಿಕೊಳ್ಳುವುದಿಲ್ಲ, ನಾನು ಈಗ ಸೈಕ್ಲಿಂಗ್ ಮಾಡಿಕೊಂಡು ಬರುತ್ತಿದ್ದೇನೆ, ಮಾಸ್ಕ್ ಹಾಕಿದ್ದರೆ ಉಸಿರಾಡುವುದಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಮಾಸ್ಕ್ ಹಾಕುವುದಿಲ್ಲ ಎಂದು ವಾದಿಸಿ, ತನ್ನ ಕ್ರಮವೇ ಸರಿ ಎಂದು ಸಮರ್ಥಿಸಿಕೊಂಡನಲ್ಲದೆ, ಮೊಬೈಲ್‌ನಲ್ಲಿ ಲಾಕ್‌ಡೌನ್ ಕರ್ಫ್ಯೂವಿನ ಕಾನೂನು ನಿಯಮಗಳನ್ನು ತೋರಿಸಿ, ಆತನ ನಡುವಳಿಕೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಆರಂಭಿಸಿದಾಗ, ಆತ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ, ಇದನ್ನು ಗಮನಿಸಿದ ಜನರು, ಆತನಿಗೆ ಹಿಗ್ಗಾ ಮಗ್ಗಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ, ಆತ ಅಲ್ಲಿಂದ ಜಾಗ ಖಾಲಿ ಮಾಡಿದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss