ಕಲಬುರಗಿಯಲ್ಲಿ ಒಂದೇ ದಿನ 5 ಮಂದಿಗೆ ಕೊರೋನಾ ಸೋಂಕು: ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆ

0
69

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಇಂದು ಕಲಬುರಗಿಯಲ್ಲಿ ಮತ್ತೆ 5 ಹೊಸ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದ ಕಲಬುರಗಿಯಲ್ಲಿಯೇ ಈ 5 ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಹಾಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕಿತರಾದ ಪಿ.175 ಸಂಪರ್ಕದಲ್ಲಿದ್ದ 17 ಮತ್ತು 50 ವರ್ಷದ ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದ್ದು, ಪಿ.205 ಅವರ ಸಂಪರ್ಕದಲ್ಲಿದ್ದ 13, 19 ಮತ್ತು 30 ವರ್ಷದ ಮೂವರಿಗೆ ಕೊರೋನಾ ಸೋಂಕು ಪಾಜಿಟಿವ್ ಬಂದಿದೆ.

ಕರ್ನಾಟಕದಲ್ಲಿ ಈವರೆಗೂ 111 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 16 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here